ಕುಮಟಾ: ಗಂಗಾವಳಿ ಬಳಿಯ ಜೋಗನಗುಡ್ಡದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಮದ್ಯ ಮಾರಾಟ ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಆ ಭಾಗದಲ್ಲಿ ಅಂಗಡಿ ವ್ಯಾಪಾರ ನಡೆಸುವ ಉದಯ ನಾಯ್ಕ ಅಂಗಡಿ ಸಮೀಪದ ಸಾರ್ವಜನಿಕರ ರಸ್ತೆ ಅಂಚಿನಲ್ಲಿ ಶೆಡ್ ನಿರ್ಮಿಸಿದ್ದರು. ಆ ಶಡ್ಡಿನೊಳಗೆ ಜನರನ್ನು ಕರೆದು ಅಕ್ರಮ ಮದ್ಯ ಸೇವನೆಗೆ ಅವಕಾಶ ನೀಡಿದ್ದರು.
ಡಿ 17ರಂದು ಪೊಲೀಸ್ ನಿರೀಕ್ಷಕ ವಸಂತ ಆಚಾರ್ ಆ ಶೆಡ್ಡಿನ ಮೇಲೆ ದಾಳಿ ನಡೆಸಿ ಅಕ್ರಮ ಮದ್ಯಗಳನ್ನು ವಶಕ್ಕೆ ಪಡೆದರು. ಮದ್ಯ ಮಾರಾಟದಿಂದ ಸಂಗ್ರಹಿಸಿದ್ದ 210ರೂ ಹಣವನ್ನು ಜಪ್ತು ಮಾಡಿ ಪ್ರಕರಣ ದಾಖಲಿಸಿದರು.