ಶಿರಸಿ: ಬಡಗಿ ಕ್ರಾಸಿನ ಬಳಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಂಡ ರಾಮಚಂದ್ರ ಮರಾಠಿ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಬಂಡಲ್ ಹೊಸಕೇರಿಯ ರಾಮಚಂದ್ರ ಹೇಮು ಮರಾಠಿ (52) ವ್ಯಾಪಾರಿ. ಆದರೆ, ರಾಮಚಂದ್ರ ಮರಾಠಿಗೆ ಸರಾಯಿ ಮಾರಾಟ ಮಾಡಲು ಅನುಮತಿ ಇಲ್ಲ. ಅದಾಗಿಯೂ ಆತ ಬಡಗಿ ಕ್ರಾಸಿನ ಬಳಿ ನ 14ರ ರಾತ್ರಿ 8.30ಕ್ಕೆ ಸರಾಯಿ ಮಾರಾಟ ಮಾಡುತ್ತಿದ್ದ. ಆಗ ಪೊಲೀಸ್ ಉಪನಿರೀಕ್ಷಕ ಪ್ರತಾಪ ಪಚ್ಚಪ್ಪಗೋಳ್ ಆತನ ವಿಚಾರಣೆ ನಡೆಸಿದರು.
ಕಾನೂನುಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಕೊಟ್ಟ ಕಾರಣ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಮದ್ಯ ಮಾರಾಟದಿಂದ ಆತನಿಗೆ ದೊರೆತ 320ರೂ ಹಣ, ಅಲ್ಲಿದ್ದ 8 ಸರಾಯಿ ಪ್ಯಾಕೇಟ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದರು.