ಬೇಡರ ವೇಷ ಎಂಬುದು ಶಿರಸಿ ಹೋಳಿ ಹಬ್ಬದ ಮತ್ತೊಂದು ವಿಶೇಷ. ಶುಕ್ರವಾರ ನಡೆದ ಬೇಡರ ವೇಷದ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು.
ಶಿರಸಿ ಮಾರಿಕಾಂಬಾ ಆವರಣ ಮತ್ತು ಪ್ರಮುಖ ಬೀದಿಗಳಲ್ಲಿ ಈ ದಿನ ಅದ್ಧೂರಿ ಕುಣಿತ ನಡೆಯಿತು. ವಿವಿಧ ವೇಷಭೂಷಣಗಳೊಂದಿಗೆ ಬಂದ ಬೇಡರ ವೇಷಧಾರಿಗಳು ಜನರ ಮನ ಗೆದ್ದರು. ಕತ್ತಿ ಹಿಡಿದು ಜಳಪಿಸುವ ವೇಷದಾರಿಗಳ ಚಾಣಕ್ಯತೆಯನ್ನು ನೆರೆದಿದ್ದವರು ಕಣ್ತುಂಬಿಕೊoಡರು.
ಚಿಕ್ಕಮಕ್ಕಳಿoದ ಹಿಡಿದು ವಯೋವೃದ್ಧರವರೆಗೆ ಬೇಡರ ವೇಷದ ಗುಣಗಾನ ಮಾಡಿದರು. ದೇವಿಕೆರೆಯಲ್ಲಂತೂ ಅತ್ಯಂತ ವಿಶಿಷ್ಟವಾಗಿ ಹೋಳಿ ಹಬ್ಬದ ಆಚರಣೆ ನಡೆಯಿತು. ಅತ್ಯಂತ ಸಂಭ್ರಮ, ಸಡಗರದಿಂದ ಸಾರ್ವಜನಿಕರು ಕುಣಿದು ಕುಪ್ಪಳಿಸಿದರು. ಪರಸ್ಪರ ಬಣ್ಣ ಎರೆಚಿ ಸಂಭ್ರಮಿಸಿದರು.