ಅಂಕೋಲಾ: ಮೂರ್ಛೆ ರೋಗದಿಂದ ಬಳಲುತ್ತಿದ್ದ ಚಾಲಕ ಲಾರಿ ಓಡಿಸಿದ ಪರಿಣಾಮ ದುರ್ಗಾದೇವಿ ದೇವಸ್ಥಾನದ ಎದುರು ಅವಘಡವೊಂದು ನಡೆದಿದೆ. ಲಾರಿ ಚಾಲಕ ಮೂರ್ಚೆ ಹೋದ ನಂತರವೂ ಚಲಿಸಿದ ಲಾರಿ ಸ್ಕೂಟಿಯೊಂದಕ್ಕೆ ಗುದ್ದಿ ನಿಂತಿದೆ.
ಗುರುವಾರ ಜೈಹಿಂದ ಸರ್ಕಲ್ ಕಡೆಯಿಂದ ಕಾರವಾರ ಕಡೆ ಲಾರಿ ಚಲಿಸುತ್ತಿತ್ತು. ಈ ವೇಳೆ ಲಾರಿ ಚಾಲಕ ಮೂರ್ಛೆ ತಪ್ಪಿದ್ದು, ಆ ವೇಳೆ ಲಾರಿ ರಸ್ತೆ ಪಕ್ಕದಲ್ಲಿ ಚಲಿಸಿದೆ. ಈ ವೇಳೆ ಅಲ್ಲಿ ಜನ ಸಂಚಾರ ಇರಲಿಲ್ಲ. ವ್ಯಕ್ತಿಯೊಬ್ಬರು ತಮ್ಮ ಸ್ಕೂಟಿ ನಿಲ್ಲಿಸಿ ಅಂಗಡಿ ಕಡೆ ಹೋಗಿದ್ದು, ಆ ಸ್ಕೂಟಿಗೆ ಲಾರಿ ಗುದ್ದಿದೆ. ಈ ವೇಳೆ ಬೈಕಿಗೂ ಲಾರಿ ಗುದ್ದಿದೆ.
ದುರ್ಗಾದೇವಿ ದೇವಸ್ಥಾನದ ಬಳಿ ಬಸ್ಸು ಏರಲು ಸದಾ ಜನ ನಿಂತಿರುತ್ತಿದ್ದರು. ಆದರೆ, ಈ ದಿನ ಜನರಿಲ್ಲದ ಕಾರಣ ದುರಂತ ತಪ್ಪಿದೆ. ಪಿಎಸ್ಐ ಸುನೀಲ ಸ್ಥಳ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದರು.