ಆರತಿಬೈಲ್ ಘಟ್ಟದಲ್ಲಿ ಲಾರಿಯೊಂದು ಹೆದ್ದಾರಿ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಅಪಘಾತದಿಂದ ಲಾರಿ ಸಂಪೂರ್ಣ ಜಖಂ ಆಗಿದೆ.
ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಈ ಲಾರಿ ಹೊರಟಿತ್ತು. ಮಂಗಳವಾರ ಆರತಿಬೈಲ್ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿತು. ಇಳಿಜಾರಿನಲ್ಲಿ ವೇಗವಾಗಿ ಬಂದ ಲಾರಿ ಹಳ್ಳದ ಹಾದಿ ಹಿಡಿಯಿತು.
ಲಾರಿ ಒಳಗಿದ್ದ ಚಾಲಕ ಅಲ್ಲಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡರು. ಅದಾಗಿಯೂ ಚಾಲಕನಿಗೆ ಸಣ್ಣ-ಪುಟ್ಟ ಪೆಟ್ಟಾಗಿದೆ. ಲಾರಿಯಲ್ಲಿದ್ದ ಮೂಟೆಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಹಳ್ಳದಲ್ಲಿ ಬಿದ್ದಿವೆ.