ಶಿರಸಿ: ಇಲ್ಲಿನ ಮಂಜಗುಣಿ ದೇಗುಲದಿಂದ ಸರಕಾಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ.
ದಕ್ಷಿಣದ ತಿರುಪತಿ ಎಂದು ಪ್ರಸಿದ್ಧವಾದ ಈ ದೇವಾಲಯದ ಹುಂಡಿಯ ಹಣ ಸರಕಾರಕ್ಕೆ ವರವಾಗಿದೆ. ಮುಜುರಾಯಿ ಇಲಾಖೆಗೆ ಸೇರಿದ ಜಿಲ್ಲೆಯ ದೇವಾಲಯಗಳ ಪೈಕಿ ಮಂಜಗುಣಿಯ ವೆಂಕಟರಮಣ ದೇವಸ್ಥಾನ ಆದಾಯ ಕೊಡುವಲ್ಲಿ ಮೊದಲ ಸ್ಥಾನದಲ್ಲಿದೆ. ಈ ದೇವಸ್ಥಾನವು 2023-24ನೇ ಸಾಲಿನಲ್ಲಿ 2.02 ಕೋಟಿ ರೂ ಆದಾಯಗಳಿಸಿದೆ. ಅದಾದ ನಂತರ ಕುಮಟಾದ ಬಾಡ ಕಾಂಚಿಕಾ ಪರಮೇಶ್ವರಿ ದೇವಸ್ಥಾನ 82.24 ಲಕ್ಷ ರೂ, ಶಿರಸಿಯ ರಾಯರಪೇಟೆ ಗಣಪತಿ ದೇವಸ್ಥಾನ 80.27 ಲಕ್ಷ ರೂ ಆದಾಯಗಳಿಸಿ ತನ್ನಲ್ಲಿದ್ದ ನಿಧಿಯನ್ನು ಒಪ್ಪಿಸಿದೆ.
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ದೇವಾಲಯದ ವಾರ್ಷಿಕ ಲೆಕ್ಕಾಚಾರಗಳನ್ನು ಜಿಲ್ಲಾ ಮುಜರಾಯಿ ಇಲಾಖೆ ಸಂಗ್ರಹಿಸುತ್ತದೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಇಡಗುಂಜಿಯ ಸಿದ್ದಿವಿನಾಯಕ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನಗಳು ನೇರವಾಗಿ ಮುಜರಾಯಿ ಹಿಡಿತದಲ್ಲಿಲ್ಲ. ಇದರಿಂದ ಅವುಗಳ ಆದಾಯ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ. ಮುಜರಾಯಿ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಪೈಕಿ ಭಟ್ಕಳದ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಾಲಯ ಆದಾಯ ಮಾತ್ರ ಹೊರ ಬಿದ್ದಿಲ್ಲ.
ಇನ್ನೂ ಮಾತ್ಹೋಬಾರ ಮುರುಡೇಶ್ವರ ದೇವಸ್ಥಾನ 45.56 ಲಕ್ಷ ರೂ, ಭಟ್ಕಳದ ಸೂಸಗಡಿ ಚನ್ನಪಟ್ಟಣ ಹನುಮಂತ ದೇವಸ್ಥಾನ 35.39 ಲಕ್ಷ ರೂ, ಭಟ್ಕಳ ಕಡವಿನಕಟ್ಟಾ ದರ್ಗಾಪರಮೇಶ್ವರಿ ದೇವಸ್ಥಾನ 31.34 ಲಕ್ಷ ರೂ, ಶಿರಸಿ ಬನವಾಸಿಯ ಮಧುಕೇಶ್ವರ ದೇವಸ್ಥಾನ 26.10 ಲಕ್ಷ ರೂ, ಗೋಕರ್ಣ ಮಹಾಗಣಪತಿ ದೇವಸ್ಥಾನ 22.73 ಲಕ್ಷ ರೂ, ಕಾರವಾರದ ಮಹಾದೇವ ದೇವಸ್ಥಾನ 21.39 ಲಕ್ಷ ರೂ, ಚಿತ್ತಾಕುಲಾ ಮಹಾಮಾಯಾ ದೇವಸ್ಥಾನ 15.83 ಲಕ್ಷ ರೂ ಆದಾಯವನ್ನು ಸರಕಾರಿ ಖಜಾನೆಗೆ ಒಪ್ಪಿಸಿದೆ.
Discussion about this post