ಮುಂಡಗೋಡ: ವಧೆ ಮಾಡುವ ಉದ್ದೇಶದಿಂದ ಎಮ್ಮೆ ಕರುಗಳನ್ನು ಸಾಗಿಸುತ್ತಿದ್ದ ಮಂಜುನಾಥ ಬಾಡದ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಘಟಗಿಯ ಮಂಜುನಾಥ ಭೀಮಪ್ಪ ಬಾಡದ ಟಾಟಾ ಎಸ್ ವಾಹನದಲ್ಲಿ ನಾಲ್ಕು ಎಮ್ಮೆ ಕರುಗಳನ್ನು ತುಂಬಿದ್ದ. ಅವುಗಳಿಗೆ ಅಲ್ಲಿ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಹುಲ್ಲನ್ನು ಹಾಕಿರಲಿಲ್ಲ. ವಾಹನಕ್ಕೆ ತಾಟಪತ್ರೆ ಮುಚ್ಚಿ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಅವನ್ನು ಸಾಗಿಸುತ್ತಿದ್ದ.
ಪಿಎಸ್ಐ ಹನುಮಂತ ಕುಡಗುಂಡಿ ಆ ವಾಹನ ತಪಾಸಣೆ ನಡೆಸಿದರು. ಜಾನುವಾರು ಸಾಗಾಟಕ್ಕೆ ಪಡೆದ ಅನುಮತಿ ಬಗ್ಗೆ ಪ್ರಶ್ನಿಸಿದರು. ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದದನ್ನು ಗಮನಿಸಿ ಎಮ್ಮೆ ಕರುಗಳನ್ನು ಅಲ್ಲಿಂದ ಬಿಡುಗಡೆ ಮಾಡಿದರು. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡರು. ಪೊಲೀಸ್ ಸಿಬ್ಬಂದಿ ರಾಜೇಶ್ ನಾಯ್ಕ ತನಿಖೆ ನಡೆಸುತ್ತಿದ್ದಾರೆ.