ಐದು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರದ ಮಾವಳ್ಳಿ ಜಾತ್ರೆಯಲ್ಲಿ ಜೂಜಾಟ ನಡೆದಿದೆ. ದೇವಿ ಜಾತ್ರೆಯಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಕೆಲಸವನ್ನು ಪೊಲೀಸರು ತಡೆದಿದ್ದಾರೆ.
ಮಾವಳ್ಳಿ ಜಾತ್ರೆಗಾಗಿ ಎಲ್ಲಡೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಆ ವಿದ್ಯುತ್ ದೀಪದ ಬೆಳಕಿನಲ್ಲಿ ಯಲ್ಲಾಪುರದ ಬೊಂಡಗೇಸರದ ಕಿರಣ ಗಾಂವಕಾರ್ ಗುಡುಗುಡಿ ನಡೆಸಿ ಹಣ ಪಡೆಯುತ್ತಿದ್ದರು. ಸೂರ್ಯ-ಚಂದ್ರ, ಇಸ್ಪಿಟ್ ಎಲೆಗಳ ಮೇಲೆ ಅವರು ಹಣ ಹೂಡುವಂತೆ ಜನರನ್ನು ಪ್ರಜೋದಿಸುತ್ತಿದ್ದರು. ಕಿರಣ ಗಾಂವಕಾರ್ ಜೊತೆ ಇನ್ನಿಬ್ಬರು ಈ ಆಟವಾಡಿಸುತ್ತಿದ್ದು, ಪೊಲೀಸರನ್ನು ಕಂಡ ಅವರು ಅಲ್ಲಿಂದ ಪರಾರಿಯಾದರು.
ಮಾವಳ್ಳಿಯ ನೀರಿನ ಟಾಕಿಯ ಬಳಿ ಜೂಜಾಡಿಸುತ್ತಿದ್ದ ಕಿರಣ ಗಾಂವಕಾರ್ ಬಳಿ 510ರೂ ಹಣ ಸಿಕ್ಕಿದೆ. ಪಿಎಸ್ಐ ಶೇಡ್ಜಿ ಚೌಹಾಣ್ ತಂಡದವರು ಹಣ ಎಣಿಸುತ್ತಿದ್ದ ಕಿರಣ ಗಾಂವಕಾರ್’ರನ್ನು ಹಿಡಿದರು. ಅದಾಗಿಯೂ ಕಿರಣ ಗಾಂವಕಾರ್ ಪೊಲೀಸರಿಗೆ ಉಳಿದಿಬ್ಬರ ಹೆಸರು ಹೇಳದೇ ಪರಾರಿಯಾದರು.