ಕುಮಟಾ ಬಳಿಯಿರುವ ಐತಿಹಾಸಿಕ ಮಿರ್ಜಾನ್ ಕೋಟೆಗೆ ಅಳವಡಿಸಿದ ನಾಮಫಲಕ ಹಾಗೂ ಅದರ ಕಂಬ ಬೀಳುವ ಹಂತದಲ್ಲಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆದಿಲ್ಲ.
ಪುರಾತತ್ವ ಇಲಾಖೆ ಅಡಿಯಲ್ಲಿ ಮಿರ್ಜಾನ್ ಕೋಟೆಯ ಉಸ್ತುವಾರಿ ನಡೆಯುತ್ತಿದೆ. ಆದರೆ, ಇಲ್ಲಿ ಸ್ವಚ್ಚತೆ, ಕೋಟೆ ನಿರ್ವಹಣೆ ಎಲ್ಲವೂ ಅಷ್ಟಕಷ್ಟೆ. ಪ್ರವಾಸಿಗರಿಗೆ ಮಾಹಿತಿ ನೀಡುವ ನಾಮಫಲಕದಲ್ಲಿನ ಅಕ್ಷರ ಅಳಸಿದ್ದರೂ ಅದನ್ನು ಬರೆಯುವವರಿಲ್ಲ. ಇದೀಗ ಆ ನಾಮಫಲಕ ಅಪಾಯದಲ್ಲಿದ್ದು, ಅದನ್ನು ರಕ್ಷಿಸಲು ಸಹ ಅಧಿಕಾರಿಗಳು ಮುಂದಾಗಿಲ್ಲ. ಪ್ರಸ್ತುತ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಿದ್ದರೂ ಮಳೆ ಮುಗಿದಾಗ ನಿತ್ಯ ಸಾವಿರ ಸಂಖ್ಯೆಯ ಜನ ಸೇರುತ್ತಾರೆ.
Discussion about this post