ಹೊಲದಲ್ಲಿ ಬೆಳೆದ ಹುಲ್ಲಿಗೆ ಹೊಡೆಯಲು ತಂದಿದ್ದ ಕಳೆನಾಶಕವನ್ನು ಸರಾಯಿ ಜೊತೆ ಮಿಶ್ರಣ ಮಾಡಿ ಸೇವಿಸಿದ ರೈತರೊಬ್ಬರು ಸಾವನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಹಿಂಡಲಗಿಯ ಮಂಜುನಾಥ ಚವಲಗಿ ರೈತಾಪಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆಗಾಗ ಮದ್ಯ ವ್ಯಸನವನ್ನು ಅವರು ಮಾಡುತ್ತಿದ್ದರು. ಫೆ 21ರಂದು ಹಳಿಯಾಳಕ್ಕೆ ಬಂದಿದ್ದ ಅವರು ಸರಾಯಿಗೆ ಹುಲ್ಲಿಗೆ ಹೊಡೆಯುವ ಕಳೆನಾಶಕವನ್ನು ಸೇರಿಸಿ ಸೇವಿಸಿದ್ದರು.
ಮದ್ಯ ಸೇವನೆ ನಂತರ ಅಸ್ವಸ್ಥರಾದ ಅವರನ್ನು ಸಹೋದರ ಸಂಜು ಚವಲಗಿ ಹಳಿಯಾಳ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಅಗತ್ಯ ಎಂದ ಕಾರಣ ಆಂಬುಲೆನ್ಸ ಮೂಲಕ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚೇತರಿಸಿಕೊಳ್ಳುತ್ತಿದ್ದ ಮಂಜುನಾಥ ಚವಲಗಿ ಫೆ 22ರ ಸಂಜೆ ಸಾವನಪ್ಪಿದರು.
ಮತ್ತೆ ಹಳಿಯಾಳಕ್ಕೆ ಬಂದ ಸಂಜು ಚವಲಗಿ ಪೊಲೀಸ್ ಪ್ರಕರಣ ದಾಖಲಿಸಿ, ಆಸ್ಪತ್ರೆಯಿಂದ ಶವ ಬಿಡಿಸಿಕೊಂಡರು.