ಕುಮಟಾ: `ಕೆಲ ಬಿಜೆಪಿಗರೇ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ನನಗೆ ಶಾಸಕ ಸ್ಥಾನದ ಮೇಲೆ ವ್ಯಾಮೋಹವಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ.
`ಕೆಲವು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಅನಗತ್ಯ ವಿಷಯ ಚರ್ಚೆಯಾಗಿದೆ. ಈ ರೀತಿ ಅಪಪ್ರಚಾರ ಮಾಡಿಸಿದವರು ನಮ್ಮ ಪಕ್ಷದವರೇ ಹೊರತು ಬೇರೆಯವರಲ್ಲ’ ಎಂದು ದಿನಕರ ಶೆಟ್ಟಿ ಅಸಮಧಾನ ಹೊರಹಾಕಿದ್ದಾರೆ. `ನನಗೆ ಶಾಸಕನಾಗಬೇಕು ಎನ್ನುವ ವ್ಯಾಮೋಹವಿಲ್ಲ. ಅಧಿಕಾರ ಇಲ್ಲದಿದ್ದರೂ ಹಿಂದುತ್ವಕ್ಕಾಗಿ ನಾನು ಕೆಲಸ ಮಾಡುವೆ. ಅಪಪ್ರಚಾರ ಮಾಡಿದವರು ವಾಸ್ತವವನ್ನು ಅರಿಯಲಿ’ ಎಂದವರು ಹೇಳಿದ್ದಾರೆ.
`ಕುಮಟಾ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬಂದವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಾರದು ಎಂದು ಹೇಳುತ್ತಿರುವುದು ಬೇಸರ ಮೂಡಿಸಿದೆ. ನಾನು ಬಿಜೆಪಿ ಸೇರಿದ ನಂತರ ಪಕ್ಷಕ್ಕಾಗಿ ಹಗಲಿರುಳು ನಿಶ್ವಾರ್ಥತೆಯಿಂದ ದುಡಿಯುತಿದ್ದು, ಇದು ಎಲ್ಲರಿಗೂ ಗೊತ್ತಿದೆ. ನಾನೊಬ್ಬ ಹಿಂದುವಾಗಿ ಬಿಜೆಪಿ ತತ್ವ,ಸಿದ್ದಾಂತಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದವರು ಹೇಳಿದರು.
`ಆರ್.ಎಸ್.ಎಸ್ ಪ್ರಮುಖ ದತ್ತಾತ್ರೇಯ ಬಾಳೆಯವರು ನೀಡಿದ ಹೇಳಿಕೆಯನ್ನು ಕೆಲವರು ತಿರುಚಿದ್ದಾರೆ. ನಾನು ಬಿಜೆಪಿ ಸೇರಿದ ನಂತರ ಪಕ್ಷದ ಎಲ್ಲಾ ಕಾರ್ಯಕರ್ತರು ನನಗೆ ಶಕ್ತಿಯನ್ನು ತುಂಬಿದ್ದಾರೆ. ನಮ್ಮಪಕ್ಷದ ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ನನಗೆ ಸಹಕಾರ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ನೀತಿಯನ್ನು ಅನುಸರಿಸಿಲ್ಲ’ ಎಂದವರು ಸ್ಪಷ್ಟಪಡಿಸಿದ್ದಾರೆ.
ಶಾಸಕ ದಿನಕರ ಶೆಟ್ಟಿ ಮತ್ತೇನು ಹೇಳಿದರು? ವಿಡಿಯೋ ಇಲ್ಲಿ ನೋಡಿ..