ಮುಂಡಗೋಡ: ಶಿರಸಿಯಿಂದ ಬುಲೇರೋ ಓಡಿಸಿಕೊಂಡು ಬಂದ ಪೈರೋಜ್ ಖಾನ್ ಎಂಬಾತ ಕಾತೂರಿನಲ್ಲಿ ಬೈಕಿಗೆ ಗುದ್ದಿದ್ದು, ಇದರಿಂದ ಬೈಕ್ ಸವಾರ ಬಸವರಾಜ ಸಾಳುಂಕೆ ಗಾಯಗೊಂಡಿದ್ದಾರೆ.
ಶಿರಸಿಯ ರಾಮನಬೈಲ್’ನಲ್ಲಿ ಚಾಲಕನಾಗಿರುವ ಪೈರೋಜ್ ಖಾನ್ ಜುಲೈ 13ರಂದು ಮುಂಡಗೋಡು ಕಡೆ ಹೊರಟಿದ್ದ. ಇದೇ ವೇಳೆ ಬಸವರಾಜ ಸಾಳುಂಕೆ ಶಿರಸಿ ಕಡೆ ಪ್ರಯಾಣಿಸುತ್ತಿದ್ದ. ಕಾತೂರು ಗ್ರಾಮದ ಶಂಬಯ್ಯ ಹಿರೇಮಠ್ ಅವರ ಹೊಲದ ಬಳಿ ಬುಲೇರೋ ಚಾಲಕ ಎಡಬದಿ ಬಿಟ್ಟು ಬಲಬದಿಗೆ ತನ್ನ ವಾಹನ ತಿರುಗಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಬೈಕ್ ಓಡಿಸುತ್ತಿದ್ದ ಬಸವರಾಜ್ ಸಾಳುಂಕೆಯ ತಲೆ ಹಾಗೂ ಕೈಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದೆ. ಬೈಕಿನ ಹಿಂದೆ ಕುಳಿತಿದ್ದ ಕೂಲಿ ಕೆಲಸ ಮಾಡುವ ಚಿಟಗೇರಿಯ ಕಾನು ಪಾಲೆ’ಗೆ ಸಹ ಗಾಯವಾಗಿದೆ.
Discussion about this post