ಮುಂಡಗೋಡ: ಕೋಡಂಬಿಯ ರಾಮಣ್ಣ ಪವಾರ ಅವರ ಹೊಲದಿಂದ ಈರಪ್ಪ ಬಂಡಿ ಹೊಲದವರೆಗೆ ನರೆಗಾ ಅಡಿ ಕಾಲುವೆ ನಿರ್ಮಾಣ ಕೆಲಸ ನಡೆಯುತ್ತಿದೆ.
ಗ್ರಾಮೀಣ ಪ್ರದೇಶದ ನೂರಾರು ಕೂಲಿಕಾರರಿಗೆ ನರೇಗಾ ಅಡಿ ಇಲ್ಲಿ ಕೆಲಸ ಕೊಡಲಾಗಿದ್ದು, ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ್ ಶುಕ್ರವಾರ ಅಲ್ಲಿಯೇ `ರೋಜಗಾರ ದಿವಸ’ದ ಬಗ್ಗೆ ಮಾಹಿತಿ ನೀಡಿದರು. `ದುಡಿಯುವ ಕೈಗಳಿಗೆ ಕೆಲಸ ಕೊಡುವುದರೊಂದಿಗೆ ಅಭಿವೃದ್ಧಿ ಕೆಲಸಗಳಿಗೆ ನರೆಗಾ ಸಹಕಾರಿ’ ಎಂದರು. `ಗ್ರಾಮೀಣ ಸಮಸ್ಯೆಗಳಿಗೆ ಆರ್ಡಿಪಿಆರ್ ಇಲಾಖೆಯ ಸಹಾಯವಾಣಿ 8277506000ಗೆ ಕರೆ ಮಾಡಬಹುದು’ ಎಂದು ತಿಳಿಸಿದರು.
`ಹಳ್ಳಿಗಾಡು ಜನರ ಜೀವನಮಟ್ಟ ಸುಧಾರಣೆಗಾಗಿ ನರೆಗಾ ಅಡಿ ಅಡಿಕೆ, ಪಪ್ಪಾಯಿ, ಚಿಕ್ಕು, ಪೇರಲ, ದಾಳಿಂಬೆ, ಡ್ರ್ಯಾಗನ್ ಫ್ರೂಟ್ನಂತಹ ವಿವಿಧ ತೋಟಗಾರಿಕೆ ಬೆಳೆಗಳಿಗೆ ಅವಕಾಶವಿದೆ. ದನದ ಕೊಟ್ಟಿಗೆ, ಕುರಿ, ಕೋಳಿ, ಮೇಕೆ, ಹಂದಿ ಶೆಡ್, ಬಯೋ ಗ್ಯಾಸ್ ಘಟಕ, ಕೊಳವೆ ಬಾವಿ ಮರುಪೂರಣ ಘಟಕ, ಮಳೆನೀರು ಕೊಯ್ಲು ಘಟಕ, ಕೃಷಿ ಹೊಂಡ, ಬಾವಿ ನಿರ್ಮಾಣ ಸೇರಿದಂತೆ ವೈಯಕ್ತಿಕ ಕಾಮಗಾರಿ ನಡೆಸಬಹುದು’ ಎಂದರು.
Discussion about this post