ವಿಪರೀತ ಮೊಬೈಲ್ ಮಾಯೆಗೆ ಒಳಗಾದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೊಬೈಲ್ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಳಿಯಾಳ ತಾಲೂಕಿನ ಬೆಳವಟಿಕೆ ಗ್ರಾಮದ ಮಾನಸಾ ಮಿರಾಶಿ (17) ಸದಾ ಮೊಬೈಲ್ ನೋಡುತ್ತಿದ್ದರು. ಹೀಗಾಗಿ ಅವರ ಮನೆಯವರು ಆ ಮೊಬೈಲ್ ಕಿತ್ತುಕೊಂಡಿದ್ದರು. ಎಷ್ಟೇ ಕಾಡಿ-ಬೇಡಿದರೂ ಮೊಬೈಲ್ ಮರಳಿಸಲು ಒಪ್ಪಿರಲಿಲ್ಲ. ಹೀಗಾಗಿ ಮಾನಸಾ ಬೇಸರದಿಂದ ಇದ್ದರು.
ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊಬೈಲ್’ಗಾಗಿ ಮಾನಸಾ ಹುಡುಕಾಟ ನಡೆಸಿದರು. ಮೊಬೈಲ್ ಸಿಗದ ನೋವಿನಲ್ಲಿ ಅವರು ಮನೆಯಲ್ಲಿಯೇ ನೇಣು ಹಾಕಿಕೊಂಡರು. ಹಳಿಯಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.