ಮುಂಡಗೋಡು: ಕಾನೂನುಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಆನಂದನಗರದಲ್ಲಿ ವಾಸವಾಗಿದ್ದ 27 ವರ್ಷದ ಕಿರಣ ಪ್ರಕಾಶ ಸೋಳಂಕಿ ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ. ಇಂದಿರಾನಗರದಲ್ಲಿ ವಾಸವಾಗಿದ್ದ 28 ವರ್ಷದ ಮಂಜು ಅರ್ಜುನ ನೆವಲೆ ಸಹ ಪ್ಲಂಬಿAಗ್ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ. ಆದರೆ, ಈ ಇಬ್ಬರು ಪ್ರತ್ಯೇಕವಾಗಿ ಕಾನೂನುಬಾಹಿರ ಬಡ್ಡಿ ವ್ಯವಹಾರ ನಡೆಸುತ್ತಿದ್ದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ನ್ಯಾಯಾಲಯದ ಅನುಮತಿಗಾಗಿ ಕಾದಿದ್ದರು. ಅನುಮತಿ ಸಿಕ್ಕ ಕೂಡಲೇ ಆ ಇಬ್ಬರ ಮನೆ ಮೇಲೆ ಪೊಲೀಸ್ ನಿರೀಕ್ಷಕ ಪರಶುರಾಮ ಮಿರ್ಜಗಿ ತಮ್ಮ ತಂಡದೊoದಿಗೆ ದಾಳಿ ನಡೆಸಿದರು. ಆಗ ಅವರು ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವ ದಾಖಲೆಗಳು ಸಿಕ್ಕಿದವು. ಅಕ್ರಮ ಬಡ್ಡಿ ವ್ಯವಹಾರದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ಆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡರು.
ಮಳಗಿ ಮಟ್ಕಾ ಅಡ್ಡೆ ಮೇಲೆಯೂ ದಾಳಿ
ಮಳಗಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಹರಿಶ ರಾಮಣ್ಣ ಈಡಗೋಡ್ (42) ಎಂಬಾತನ ಮೇಲೆಯೂ ಪೊಲೀಸರು ದಾಳಿ ನಡೆಸಿದರು. ಕೂಲಿ ಕೆಲಸ ಮಾಡುವ ಈತ ಬಸ್ ನಿಲ್ದಾಣದ ಎದುರು 1ರೂಪಾಯಿಗೆ 80ರೂ ನೀಡುವುದಾಗಿ ತಿಳಿಸಿ ಹಣ ಪಡೆಯುವ ವೇಳೆ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ್ ಬಳಿ ಸಿಕ್ಕಿಬಿದ್ದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡರು.