ಕಾರವಾರ: ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳು `ತಮಗೆ ಸೊಳ್ಳೆ ಕಾಟದಿಂದ ಮುಕ್ತಿ ಕೊಡಿ’ ಎಂದು ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾರೆ. ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಎಸ್ ಕೆ ವಂತಿಕೋಡಿ ಸೋಮವಾರ ಜೈಲಿಗೆ ಭೇಟಿ ನೀಡಿದಾಗ ಅಲ್ಲಿದ್ದವರು ಅಳಲು ತೋಡಿಕೊಂಡರು!
`ಜೈಲಿನ ಕಿಟಕಿಗಳಿಗೆ ಸೊಳ್ಳೆ ಪರದೆ ಹಾಕಿಸಿ. ಜೊತೆಗೆ ಸ್ವಚ್ಛತೆಗೆ ಒತ್ತು ಕೊಡಿ’ ಎಂದು ಈ ವೇಳೆ ಎಸ್ ಕೆ ವಂತಿಕೋಡಿ ಕಾರಾಗೃಹ ಸಿಬ್ಬಂದಿಗೆ ಸೂಚಿಸಿದರು. `ಎಲ್ಲಾ ಕೈದಿಗಳನ್ನು ವೈದ್ಯಕೀಯ ತಪಾಸಣೆ ನಡೆಸಿ. ಜೊತೆಗೆ ಜೈಲು ಗೋಡೆಗಳಿಗೆ ಬಣ್ಣ ಬಡಿಯಿರಿ’ ಎಂದು ಅವರು ಹೇಳಿದರು.
ಕಾರಾಗೃಹದ ಅಡುಗೆ ಮನೆಗೆ ಭೇಟಿ ನೀಡಿದ ಅವರು ಅಲ್ಲಿನ ಆಹಾರ ಸೇವಿಸಿದರು. ತಾಜಾ ಮತ್ತು ಗುಣಮಟ್ಟದ ಕಾಳುಗಳು ಮತ್ತು ತರಕಾರಿಗಳನ್ನು ಬಳಕೆ ಮಾಡುವಂತೆ ಅಡಿಗೆ ಸಿಬ್ಬಂದಿಗೆ ಸೂಚಿಸಿದರು. ಜೈಲಿನ ಕೈದಿಗಳ ಜೊತೆ ಮಾತನಾಡಿ `ಇಲ್ಲಿ ಊಟ ಸರಿಯಾಗಿದೆಯಾ? ಎಲ್ಲರನ್ನು ವಿಚಾರಣೆಗೆ ಕೋರ್ಟಿಗೆ ಕರೆದೊಯ್ಯುತ್ತಿದ್ದಾರ?” ಎಂದು ಪ್ರಶ್ನಿಸಿದರು. ವಕೀಲರ ನೇಮಕಾತಿ ಬಗ್ಗೆ ಮಾಹಿತಿ ಪಡೆದರು.
ನಂತರ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಯೂ ದಾಖಲಾತಿ ಪರಿಶೀಲಿಸಿದರು.