ಶಿರಸಿ: `ಮುಖ್ಯಮಂತ್ರಿಯ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ಮೀರಿ ರಾಜಕೀಯ ಒತ್ತಡಕ್ಕೆ ಸಿಲುಕಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರಿನ ಜಾಗೃತ ವಕೀಲರ ವೇದಿಕೆ `ಮುಡಾ ಪ್ರಕರಣ ಕೋರ್ಟುಗಳ ಆದೇಶ ಸತ್ಯಾಸತ್ಯತೆ’ ಎಂಬ ಪುಸ್ತಕ ಪ್ರಕಟಿಸಿದ್ದು, ಅದನ್ನು ಜಿಲ್ಲಾ ಕಾಂಗ್ರೇಸ್ ಸಮಿತಿಯ ಪ್ರಚಾರ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರದರ್ಶಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮೂಡಾ ಹಗರಣದ ದೂರು ಹಾಗೂ ತನಿಖೆ ಪಕ್ಷ ಮತ್ತು ಸರಕಾರ ಅಸ್ಥಿರಗೊಳಿಸುವ ರಾಜಕೀಯ ತಂತ್ರಗಾರಿಕೆಯಾಗಿದೆ’ ಎಂದು ದೂರಿದರು. `ಪೂರ್ಣ ಪ್ರಮಾಣದ ನ್ಯಾಯ ಗ್ರಹಿಕೆಯಲ್ಲಿ ವಿಫಲವಾಗಿರುವ ಉಚ್ಚನ್ಯಾಯಾಲಯದ ಆದೇಶ ಸಂಪೂರ್ಣವಾಗಿ ಒಪುವ ಹಾಗಿಲ್ಲ. ಅರ್ಜಿಯ ಹೊರತಾದ ಅಂಶ ತೀರ್ಪಿನಲ್ಲಿ ಅಡಕವಾಗಿದೆ’ ಎಂದು ಅವರು ಹೇಳಿದರು.
`ಸತ್ಯ ಹೊರಬರಲು ಸಮಯವಕಾಶ ಅಗತ್ಯ. ಅಲ್ಲಿಯವರೆಗೂ ಮುಖ್ಯಮಂತ್ರಿ ರಾಜೀನಾಮೆ ಅಗತ್ಯವಿಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೋಸಬಾಳೆ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ಹೆಗಡೆ ದೊಡ್ಡುರು ಹೇಳಿದರು. ಯಲ್ಲಾಪುರ ವಿಧಾನ ಸಭೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಬಾಬು ಗೌಡರ್ ಒದ್ದಲ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಪ್ರಶಾಂತ ಶೆಟ್ಟಿ, ರಾಜ್ಯ ಹಿಂದುಳಿದ ಕಾಂಗ್ರೇಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ರಾಜ್ಯ ಕಾಂಗ್ರೇಸ್ ಕಾನೂನು ಘಟಕದ ಕಾರ್ಯದರ್ಶಿ ಜ್ಯೋತಿ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.