ಮನೆಗೆ ಸಿಸಿ ಕ್ಯಾಮರಾ ಹಾಕಿಸಿದ ವಿಷಯವಾಗಿ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮೂಡಸಾಲಿ ಮಂಜುನಾಥ ಅವರು ತಮ್ಮ ಮೂರನೇ ಪತ್ನಿ ಮಧು ಎಂಬಾತರಿoದ ಕೊಲೆಯಾಗಿದ್ದಾರೆ!
ಮುಂಡಗೋಡಿನ ಮೂಡಸಾಲಿಯ ಮಂಜುನಾಥ ಜಾದವ್ ಅವರು ಬಂಕಾಪುರದ ಬಳಿ ಬೈಕಿನಿಂದ ಬಿದ್ದು ಸಾವನಪ್ಪಿದ ರೀತಿ ಪತ್ತೆಯಾಗಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಮಂಜುನಾಥ ಅವರ ಕೊಲೆ ಮಾಡಿ, ಬಂಕಾಪುರದಲ್ಲಿ ಅಪಘಾತದ ಕಥೆ ಕಟ್ಟಿರುವ ವಿಷಯ ಅರಿವಿಗೆ ಬಂದಿತು. ಮಂಜುನಾಥ ಅವರ ಪತ್ನಿ ಮಧು ಜೊತೆ ಮಕ್ಕಳಾದ ವಿನಯ ಹಾಗೂ ವಿಕಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಜುನಾಥ ಜಾದವ್ ಹಾಗೂ ಮಧು ನಡುವೆ ಅನೈತಿಕ ಸಂಬoಧವಿತ್ತು. ಈ ವಿಷಯ ಎಲ್ಲಡೆ ಹರಡಿದ ನಂತರ ಅನೇಕರು ಸೇರಿ ಅವರಿಬ್ಬರ ಮದುವೆ ಮಾಡಿಸಿದ್ದರು. ಅದಾದ ನಂತರ ಮಂಜುನಾಥ ಜಾದವ್ ತಮ್ಮ ತೋಟ ಮಾರಾಟ ಮಾಡಿ ಮಧು ಅವರಿಗೆ ಬ್ಯುಟಿ ಪಾರ್ಲರ್ ಹಾಕಿ ಕೊಟ್ಟಿದ್ದರು. ಆದರೆ, ಪತ್ನಿ ನಡವಳಿಕೆ ಬಗ್ಗೆ ಅನುಮಾನಗೊಂಡ ಮಂಜುನಾಥ ಜಾದವ್, ಮಧು ಮನೆಗೆ ಸಿಸಿ ಕ್ಯಾಮರಾ ಹಾಕಿಸಿದ್ದರು. ಇದೇ ವಿಷಯವಾಗಿ ಅವರಿಬ್ಬರ ನಡುವೆ ವೈಮನಸ್ಸು ಕಾಣಿಸಿಕೊಂಡಿತ್ತು.
ಶನಿವಾರ ಕೊನೆಯದಾಗಿ ಮಂಜುನಾಥ ಜಾದವ್ ತಮ್ಮ ಮೂರನೇ ಪತ್ನಿ ಮಧು ಮನೆಗೆ ಹೋಗಿದ್ದರು. ಅದಾದ ನಂತರ ಮಂಜುನಾಥರ ಕೊಲೆ ನಡೆದಿದ್ದು, ಬಂಕಾಪುರದ ಹೊರ ವಲಯದಲ್ಲಿ ಅವರ ಶವ ಬಿದ್ದ ಬೈಕಿನ ಜೊತೆ ಸಿಕ್ಕಿತ್ತು. ಕೊಲೆ ಆರೋಪಿತರು ಅಪಘಾತದಲ್ಲಿ ಮಂಜುನಾಥ ಜಾದವ್ ಸಾವನಪ್ಪಿದ ಬಗ್ಗೆ ಬಿಂಬಿಸುವ ಪ್ರಯತ್ನ ನಡೆಸಿದ್ದರು.
ಆದರೆ, ಪೊಲೀಸರಿಗೆ ಈ ಸಾವಿನಲ್ಲಿ ಅನುಮಾನ ಕಾಣಿಸಿತು. ವಿಚಾರಣೆ ನಡೆಸಿದಾಗ ಮಧು ಸತ್ಯ ಒಪ್ಪಿಕೊಂಡರು. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.