ಶಿರಸಿ: `ವಕ್ಟ್ ಹಗರಣದಲ್ಲಿ ಮುಸ್ಲೀಂ ನಾಯಕರು ಮಾತ್ರವಲ್ಲ. ಹಿಂದು ಸಮುದಾಯದವರು ಭಾಗಿಯಾಗಿದ್ದಾರೆ’ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಗುಡುಗಿದ್ದಾರೆ. `ಸರ್ಕಾರದಿಂದ ಲೀಸ್ ಆಧಾರದಲ್ಲಿ ಪಡೆದ ವಕ್ಟ್ ಆಸ್ತಿಗಳನ್ನು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸಲಾಗಿದೆ. ಇದರಿಂದ ಮುಸ್ಲೀಂ ಸಮುದಾಯದವರಿಗೂ ಯಾವುದೇ ಪ್ರಯೋಜನವಿಲ್ಲ’ ಎಂದವರು ಹೇಳಿದ್ದಾರೆ.
`ವಕ್ಟ್ ಬೋರ್ಡಿಗೆ ಈ ಪ್ರಮಾಣದಲ್ಲಿ ಆಸ್ತಿ ಮುಲ್ಲಾ, ಮೌಲ್ವಿ ಅಥವಾ ಇಮಾಮನಿಂದ ಬಂದಿದ್ದಲ್ಲ. ಮುಸ್ಲಿಂ ಧರ್ಮದ ಮೂಲವೂ ಭಾರತದಲ್ಲ. ಮುಸ್ಲಿಮರು ಯಾರಿಂದ ಈ ಭೂಮಿಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು. `ಟ್ರಸ್ಟ್ಗೆ ನೀಡಿದ ಭೂಮಿಯನ್ನು ನೀಡಿದ ಉದ್ದೇಶಕ್ಕೆ ಬಳಸಬೇಕೇ ಹೊರತೂ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ವಕ್ಟ್ ಹೆಸರಿನಲ್ಲಿರುವ ಆಸ್ತಿಗಳು ವಾಣಿಜ್ಯ ಭೂಮಿ, ಹೊಟೇಲ್ ಆಗಿ ಬದಲಾಗಿದೆ’ ಎಂದು ದೂರಿದರು.
`ವಕ್ಟ್ ಆಸ್ತಿಯ ದುರ್ಬಳಕೆಯಿಂದ ಮುಸಲ್ಮಾನರಿಗೂ ಲಾಭವಿಲ್ಲ. ಆದರೆ, ಅವರ ಹೆಸರಿನಲ್ಲಿ ಭೂಮಿ ಕಬಳಿಸುವ ಜೋರಗಿದೆ’ ಎಂದರು. `ವಕ್ಟ್ ಆಸ್ತಿ ದುರ್ಬಳಕೆ ಮಾಡಿಕೊಂಡು ಮೋಸ ಮಾಡುವವರ ವಿರುದ್ಧ ಹೋರಾಟ ಮುಂದುವರೆಯುತ್ತದೆ. ಕಂದಾಯ, ಫೋಟೋ ಆಡಿಟ್ ನಡೆದರೆ ಎಲ್ಲಾ ಸತ್ಯ ಹೊರಬರುತ್ತದೆ’ ಎಂದರು. `ಒಂದು ಸಮುದಾಯದವರನ್ನು ಓಲೈಸುವಂತಹ ರಾಜಕಾರಣ ಮಾಡುವುದನ್ನು ಹೊರತುಪಡಿಸಿದರೆ ಅಭಿವೃದ್ಧಿ ವಿಷಯದ ಬಗ್ಗೆ ಯಾರಿಗೂ ಚಿಂತೆಯಿಲ್ಲ’ ಎಂದು ಆರೋಪಿಸಿದರು.
ಇನ್ನೂ ಎಲ್ಲ ಪಕ್ಷಗಳಲ್ಲಿಯೂ ಹೊಂದಾಣಿಕೆಯ ರಾಜಕಾರಣ ನಡೆಯುತ್ತಿದ್ದು, ಜನರನ್ನು ಮಂಗ ಮಾಡಲು ಏನೇನು ಬೇಕೋ ಅದನ್ನು ಎಲ್ಲ ಪಕ್ಷಗಳು ಮಾಡುತ್ತಿವೆ’ ಎಂದು ಟೀಕಿಸಿದರು.
ಪ್ರತಾಪ ಸಿಂಹ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..