ಮುಂಗಾರು ಚುರುಕುಗೊಂಡoತೆ ಜಿಲ್ಲೆಯ ಸಣ್ಣಪುಟ್ಟ ಜಲಪಾತಗಳೆಲ್ಲವೂ ಮರುಜೀವ ಪಡೆದಿವೆ. ಕಾರವಾರದ ನಾಗರಮುಡಿ ಜಲಧಾರೆಯೂ ಪ್ರವಾಸಿಗರ ಕೇಂದ್ರವಾಗಿದೆ.
ಬೆಟ್ಟಗುಡ್ಡಗಳಿoದ ಹರಿದು ಬರುವ ನೀರಹನಿ ಕಲ್ಬಂಡೆಯoಚಿನಲ್ಲಿ ಅಪ್ಪಳಿಸುತ್ತಿದ್ದು, ಇಲ್ಲಿನ ಸಿಂಗಾರ ಕಣ್ಮನಗಳಿಗೆ ಹಬ್ಬದ ಔತಣ ನೀಡುತ್ತಿದೆ. ಚೆಂಡಿಯಾ ಗ್ರಾಮದ ಬಳಿ ಇರುವ ನಾಗರಮುಡಿ ಜಲಪಾತ ದಟ್ಟ ಕಾಡಿನ ನಡುವೆ ಝುಳು ಝುಳು ಸದ್ದು ಮಾಡುತ್ತಿದೆ. ಈ ಜಲಾಶಯದ ಸೌಂದರ್ಯ ಸವಿಯಲು ಚೆಂಡಿಯಾ ರಸ್ತೆಯಿಂದ ಮುಂದೆ ಎರಡು ಕಿಮೀ ಚಲಿಸಬೇಕು. ಅಲ್ಲಿಂದ ಕಾಲು ಹಾದಿಯಲ್ಲಿ ಸುಮಾರು ಒಂದು ಕಿಮೀ ಕಾಡುದಾರಿಯಲ್ಲಿ ಸಾಗಬೇಕು. ಆಗ ಬಂಡೆಗಲ್ಲುಗಳ ನಡುವೆ ಧುಮುಕುವ ಜಲಧಾರೆ ಕಾಣುತ್ತದೆ.
`ಈ ಸ್ಥಳದಲ್ಲಿ ನಾಗರ ಹಾವುಗಳು ನೀರು ಕುಡಿಯಲು ಬರುತ್ತಿದ್ದವು. ಹೀಗಾಗಿ ನಾಗರಮುಡಿ ಎಂಬ ಹೆಸರು ಬಂದಿದೆ’ ಎಂಬುದು ಸ್ಥಳೀಯರ ಅಂಬೋಣ. `ಇಲ್ಲಿನ ಹೊಂಡದಲ್ಲಿರುವ ಗುಹೆಯಲ್ಲಿ ದೇವರ ಹಾವುಗಳು ವಾಸವಾಗಿದೆ’ ಎಂಬ ನಂಬಿಕೆಯಿದೆ.
Discussion about this post