ಶಿರಸಿ: ನಟರಾಜ ಚಿತ್ರಮಂದಿರದಲ್ಲಿ ಬಿಡುಗಡೆಯಾದ `ಭೈರತಿ ರಣಗಲ್’ ಚಿತ್ರ ವೀಕ್ಷಣೆಗೆ ಚಿತ್ರದ ನಾಯಕ ನಟ ಶಿವರಾಜಕುಮಾರ ಶಿರಸಿಗೆ ಆಗಮಿಸಿದ್ದಾರೆ. ಬಾಲ್ಕನಿ ಆಸನದಲ್ಲಿ ಕೂತ ಅವರು ಚಿತ್ರ ವೀಕ್ಷಣೆ ಮಾಡಿದರು.
ಹ್ಯಾಟಿಕ್ ಹೀರೋ ಶಿವರಾಜಕುಮಾರ ಅವರ ಜೊತೆ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಚಿವ ಮಧು ಬಂಗಾರಪ್ಪ ಸಹ ಚಿತ್ರ ವೀಕ್ಷಿಸಿದರು. ಶಿವರಾಜಕುಮಾರ್ ಆಗಮನದ ಸುದ್ದಿ ಹಿನ್ನಲೆ ಅಪಾರ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ಈ ದಿನ ನಟರಾಜ ಟಾಕೀಸ್’ನಲ್ಲಿ `ಭೈರತಿ ರಣಗಲ್’ ಹೌಸ್ಪುಲ್ ಪ್ರದರ್ಶನ ಕಂಡಿದೆ.
ಶಿವರಾಜಕುಮಾರ ಅವರನ್ನು ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸಿ ಬರಮಾಡಿಕೊಂಡರು. ಕೆಲವರು ಶಿವರಾಜಕುಮಾರ ಅವರ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಇದಾದ ನಂತರ ಅಭಿಮಾನಿಗಳಿಗೆ ಕೈ ಬೀಸಿದ ಶಿವರಾಜಕುಮಾರ ಎಲ್ಲರಿಗೂ ಕೈ ಮುಗಿದು ನಮಸ್ಕರಿಸಿದರು. ಜೊತೆಗೆ ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ವೀಕ್ಷಿಸಿದರು. ನಟರಾಜ ಟಾಕೀಸ್ ಪರದೆಯಲ್ಲಿ ಶಿವರಾಜಕುಮಾರ್ ಅವರ ನಾಟ್ಯ ನೋಡಿದ ಜನ ಶಿಳ್ಳೆ-ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದರು.