ಬೆಂಗಳೂರಿನ ಮಲ್ಲೇಶ್ವರಂ ಬಳಿ ಡಿಸೆಂಬರ್ 5ರಿಂದ 15ರವರೆಗೆ 62ನೇ ರಾಷ್ಟ್ರೀಯ ರೊಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದೆ. ಉತ್ತರ ಕನ್ನಡದ ಮೂವರು ಕುವರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಮೂವರು ಸಿನಿಯರ್ ಡರ್ಬಿ ವಿಭಾಗದಲ್ಲಿ ಈ ವರ್ಷದ ಎರಡನೆ ರಜತ ಪದಕ ಪಡೆದು ತವರಿಗೆ ಮರಳಿದ್ದಾರೆ.
ಯಲ್ಲಾಪುರ ಪಟ್ಟಣದ YTSS ಪ ಪೂ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ ಅವರು ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆದಿದ್ದಾರೆ. ಅಗಸ್ಟ ತಿಂಗಳಿನಲ್ಲಿ ತಮಿಳುನಾಡಿನ ಕೋಯಿಮತ್ತೂರಿನಲ್ಲಿ ನಡೆದ ರಾಷ್ಟಮಟ್ಟದ `ಇಂಡಿಯಾ ಸ್ಕೇಟ್ ಚಾಂಪಿಯನ್ಶಿಫ್’ನಲ್ಲಿ ಸಹ ಸೇಜಲ್ ಸತೀಶ ನಾಯ್ಕ ಅವರು ರಜತ ಪದಕ ಪಡೆದಿದ್ದರು.
ಶಿರಸಿ MES ಕಾಲೇಜಿನ ಅನಘಾ ರಮೇಶ ಹೆಗಡೆ ಹಾಗೂ ದಾಂಡೇಲಿಯ ಸಾನಿಕಾ ಉಮೇಶ ತೊರತ್ ಸಹ ಪದಕ ಗೆದ್ದಿದ್ದಾರೆ. ಈ ಮೂವರು `ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್ಬ್’ನಲ್ಲಿ ನಾಲ್ಕು ವರ್ಷಗಳಿಂತ ತರಬೇತಿ ಪಡೆಯುತ್ತಿದ್ದಾರೆ. ತಮಿಳನಾಡು, ಉತ್ತರ ಪ್ರದೇಶ, ಓರಿಸ್ಸಾ, ತಮಿಳುನಾಡು, ಪಂಜಾಬ್, ಮಹಾರಾಷ್ಟ ಇನ್ನಿತರ ರಾಜ್ಯದ ತಂಡದವರು ಈ ಪಂದ್ಯದಲ್ಲಿ ಭಾಗವಹಿಸಿದ್ದರು. ಅವರೆಲ್ಲರ ನಡುವೆ ಪೈಪೋಟಿ ನೀಡಿದ ಕರ್ನಾಟಕದ ಈ ಮೂವರು ಪದಕ ಪಡೆದರು. ಸತತ ನಾಲ್ಕನೇ ಬಾರಿ ಕರ್ನಾಟಕ ತಂಡ ಪ್ರತಿನಿಧಿಸಿ ಈ ಮೂವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದಕ್ಕೆ ತರಬೇತುದಾರ ದೀಲಿಪ್ ಹಣಬರ್ ಹಾಗೂ ಸಹಾಯಕ ತರಬೇತುದಾರ ಮಂಜಪ್ಪಾ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನೆಗಳ ಮಹಾಪೂರ!
ಸೇಜಲ್ ನಾಯ್ಕ ಅವರು ಯಲ್ಲಾಪುರ ಪ ಪಂ ಸದಸ್ಯ ಸತೀಶ್ ನಾಯ್ಕ ಅವರ ಪುತ್ರಿ. ಸೇಜಲ್ ನಾಯ್ಕ ಅವರ ಸಾಧನೆ ಅರಿತ ಶಾಸಕ ಶಿವರಾಮ ಹೆಬ್ಬಾರ್, ಜಿ ಪಂ ಮಾಜಿ ಸದಸ್ಯ ವಿಜಯ ಮಿರಾಶಿ, ವೈಟಿಎಸ್ಎಸ್ ಅಧ್ಯಕ್ಷ ರವಿ ಶಾನಭಾಗ, ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮೀತ ಅಂಗಡಿ, ದೈಹಿಕ ಶಿಕ್ಷಕರಾದ ಗಂಗಾ ನಾಯ್ಕ ಹಾಗೂ ಜಿ ಎನ್ ತಾಂಡುರಾಯನ್ ಸಂತಸ ಹಂಚಿಕೊoಡರು.