ಕಾರವಾರ: ಮಾಜಾಳಿಯಿಂದ ಭಟ್ಕಳದವರೆಗೆ ಹಾದುಹೋಗಿರುವ ಹೆದ್ದಾರಿಯನ್ನು ಚತುಷ್ಪದ ಮಾಡುವ ವೇಳೆ ನಡೆದ ಅವಘಡ ಹಾಗೂ ಅಲ್ಲಿನ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಜಯ ಕರ್ನಾಟಕ ಜನಪರ ಸಂಘಟನೆಯವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಪತ್ರ ಬರೆದಿರುವ ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್, `ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿಯ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಅಪೂರ್ಣ ಕಾಮಗಾರಿಯನ್ನು ಕೂಡಲೇ ಮುಗಿಸಬೇಕು. ಗುಡ್ಡ ಕುಸಿಯುವ ಪ್ರದೇಶದಲ್ಲಿ ಸುರಕ್ಷತಾ ಕ್ರಮ ಅನುಸರಿಸಬೇಕು. ಸುರಕ್ಷಿತ ತಡೆಬೇಲಿ ನಿರ್ಮಿಸಿ ಜಾನುವಾರು ಹಾಗೂ ಸಾರ್ವಜನಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದವರು ಒತ್ತಾಯಿಸಿದ್ದಾರೆ. `ಕಾಮಗಾರಿಯ ವೇಳೆ ಇಲ್ಲಿನ ಕಲ್ಲುಗಳನ್ನು ಬೇರೆ ಕಡೆ ಸಾಗಿಸಲಾಗಿದೆ. ಅದರ ಬಗ್ಗೆ ತನಿಖೆ ನಡೆಯಬೇಕು. ಹಟ್ಟಿಕೇರಿ ಟೋಲ್ ಪ್ಲಾಜಾದ ಬಳಿ ಕಾಮಗಾರಿ ನಡೆಯದ ಬಗ್ಗೆಯೂ ಸ್ಪಷ್ಠೀಕರಣ ಅಗತ್ಯ’ ಎಂದವರು ಹೇಳಿದ್ದಾರೆ.
ಜಿಲ್ಲಾಡಳಿತದ ಮೂಲಕ ಸಂಘಟನೆಯ ರೋಷನ್ ಹರಿಕಂತ್ರ, ಸುದೇಶ್ ನಾಯ್ಕ, ಸುನಿಲ್ ತಾಂಡೇಲ್, ಮೋಹನ್ ಉಳ್ಬೇಕರ್ ವಿನಯ ನಾಯ್ಕ ಇತರರು ಈ ಬಗ್ಗೆ ಸಚಿವರಿಗೆ ಮನವಿ ರವಾನಿಸಿದ್ದಾರೆ.
Discussion about this post