ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಸರ್ಕಾರಿ ಹಾಸ್ಟೇಲ್’ಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಾಸ್ಟೇಲ್’ಗಳಲ್ಲಿ ಮಕ್ಕಳಿಗೆ ಅಗತ್ಯ ಸೌಕರ್ಯಗಳಿಲ್ಲ. ಮಕ್ಕಳ ಜೀವಕ್ಕೆ ಅಪಾಯವಾಗುವ ರೀತಿ ವಿದ್ಯುತ್ ತಂತಿಗಳು ಹರಡಿಕೊಂಡಿದ್ದರೂ ಅದನ್ನು ಸರಿಪಡಿಸುವವರಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಹಾಸ್ಟೇಲ್ ವಿದ್ಯಾರ್ಥಿಗಳು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
`ಹಾಸ್ಟೆಲ್ನಲ್ಲಿ ಚಿಕನ್ ಕೊಡುತ್ತಿಲ್ಲ. ಬಾಳೆಹಣ್ಣು ಬೇಡಿದರೂ ಕೊಡುವವರಿಲ್ಲ. ಬಿಸಿನೀರಿನ ಸ್ನಾನಕ್ಕೆ ಗೀಸರ್ ವ್ಯವಸ್ಥೆಯಿಲ್ಲ. ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ನೋಟ್ ಬುಕ್ ಸಹ ವಿತರಣೆ ಆಗಿಲ್ಲ’ ಎಂದು ಮಕ್ಕಳು ದೂರು ಸಲ್ಲಿಸಿದ್ದಾರೆ. ನೇರವಾಗಿ ಹೇಳಲು ಸಾಧ್ಯವಾಗದ ವಿಷಯಗಳ ಬಗ್ಗೆ ಲಿಖಿತವಾಗಿ ತಿಳಿಸಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ತಿಪ್ಪೇಸ್ವಾಮಿ ಕೆ ಟಿ ಅವರು ಉತ್ತರ ಕನ್ನಡ ಜಿಲ್ಲಾ ಪ್ರವಾಸ ನಡೆಸಿದ್ದಾರೆ. ಈ ವೇಳೆ ಅವರನ್ನು ಭೇಟಿಯಾದ ಹಾಸ್ಟೇಲ್ ಮಕ್ಕಳು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. `ಹೊಸ ಹಾಸ್ಟೇಲ್ ನಿರ್ಮಾಣವಾಗಿದ್ದರೂ ವಿದ್ಯಾರ್ಥಿಗಳ ಅನುಕೂಲಕ್ಕೆ ಸಿಗುತ್ತಿಲ್ಲ. ಹಾಸ್ಟೇಲ್ ಸ್ವಚ್ಛತೆ ಬಗ್ಗೆಯೂ ಯಾರಿಗೂ ಕಾಳಜಿಯಿಲ್ಲ. ಸ್ನಾನಕ್ಕೆ ಅಗತ್ಯವಿರುವ ಸಾಬೂನು ಸಹ ನೀಡುತ್ತಿಲ್ಲ’ ಎಂದು ಆಕ್ಷೇಪಿಸಿದರು.
ಅಲ್ಪ ಸಂಖ್ಯಾತರ ಇಲಾಖೆ ವಸತಿ ನಿಲಯದ ವಿದ್ಯಾರ್ಥಿ ಮೆಹ್ತಾಬ್ ಮೂಸಾ ಮೊಗಲ್ `ಬಿಸಿಎಂ ವಿದ್ಯಾರ್ಥಿನಿಲಯಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ನಮಗೆ ಅವರಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯಬೇಕಿತ್ತು. ಆದರೆ, ನಮಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಊಟಕ್ಕೆ ಚಿಕನ್ ಕೊಡಲ್ಲ. 45 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯವಿದ್ದು, ಅದೂ ಸಮಸ್ಯೆಯಾಗಿದೆ’ ಎಂದು ವಿವರಿಸಿದರು. ಹಾಸ್ಟೇಲ್ ವಾರ್ಡನ್’ಗೆ ನೋಟಿಸ್ ನೀಡಿ ವರದಿ ಪಡೆಯುವಂತೆ ತಿಪ್ಪೇಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸದಾಶಿವಗಡ – ಕಾರವಾರ ಮಾರ್ಗದಲ್ಲಿ ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸುವಂತೆ ವಿದ್ಯಾರ್ಥಿಗಳು ಕೋರಿದರು. ಮೆಟ್ರಿಕ್ ನಂತರ ವಿದ್ಯಾರ್ಥಿನಿ ನಿಲಯ ಸಿದ್ದರದ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಕಾಲೇಜಿಗೆ ತೆರಳಲು ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂದು ಮನವಿ ಸಲ್ಲಿಸಿದರು. ಈ ಬಗ್ಗೆ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಪ್ಪೇಸ್ವಾಮಿ ಸೂಚಿಸಿದರು. ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು `ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಕಾರÀದಿಂದ ನೀಡುವ ಸೌಲಭ್ಯಗಳು ಖಾಸಗಿ ಶಾಲೆಯ ಮಕ್ಕಳಿಗೂ ನೀಡಬೇಕು’ ಎಂದರು. ರಾಜ್ಯಾದ್ಯಂತ ಎಲ್ಲಾ ಶಾಲಾ ಮಕ್ಕಳಿಗೆ ಏಕರೂಪದ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಆಯೋಗದಿಂದ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಆಯೋಗದವರು ಸಭೆಗೆ ತಿಳಿಸಿದರು.
ಕಾರವಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳು ತಮಗೆ ನೋಟ್ ಬುಕ್ ನೀಡಿಲ್ಲ ಎಂದು ದೂರಿದರು. ನೋಟ್ ಬುಕ್ ಸರಬರಾಜು ಕುರಿತಂತೆ ಇಂಡೆoಟ್ ಸಲ್ಲಿಸಿದ್ದು, ಸರಬರಾಜು ಆದ ಕೂಡಲೇ ವಿತರಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡಿದರು. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದು ಇಷ್ಟು ವಿಳಂಬವಾಗಿ ಇಂಡೆAಟ್ ಸಲ್ಲಿಸಿರುವುದಕ್ಕೆ ಆಯೋಗ ಅಸಮಧಾನ ವ್ಯಕ್ತಪಡಿಸಿತು.