ಕಾರವಾರ: ಮಂಡ್ಯದ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿ ಮಜಾಳಿಯ ಅಬಕಾರಿ ತನಿಖಾ ಠಾಣೆಯ ಅಧಿಕಾರಿ ಸದಾಶಿವ ಕುರ್ತಿ ಅವರನ್ನು ಬೇರೆ ಕಡೆ ವರ್ಗಾಯಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಇದನ್ನು ವಿರೋಧಿಸಿ ಸಂಘಟನೆಯವರು ಪ್ರತಿಭಟನೆ ನಡೆಸಿದ್ದಾರೆ.
ಚಾಲಕ ಕುಮಾರ್ ಮೇಲೆ ಹಲ್ಲೆ ನಡೆಸಿದ ಕಾರಣ ಮಾಜಾಳಿ ತನಿಖಾ ಠಾಣೆಯ ಇನ್ಸೆಕ್ಟರ್ ಸದಾಶಿವ ಕೊರ್ತಿ ಹಾಗೂ ಸಿಬ್ಬಂದಿ ಹೇಮಚಂದ್ರ ವಿರುದ್ಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಲಾಗಿದೆ. ಇದರಿಂದ ಅಕ್ರಮ ಮದ್ಯ ಸಾಗಾಟ ಹೆಚ್ಚಾಗಿದೆ ಎಂಬುದು ಕರವೇ ದೂರು.
ರಾಜಕೀಯ ಒತ್ತಡದಿಂದ ಅಧಿಕಾರಿಗಳ ವರ್ಗ ನಡೆದಿದೆ ಎಂಬುದು ಅವರ ಆರೋಪ. ಅವರ ಮರುನಿಯೋಜನೆ ಅನಿವಾರ್ಯ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸದಾಶಿವ ಕೊರ್ತಿ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರ ಮೇಲೆ ರಾಜಕೀಯ ಒತ್ತಡ ತಂದು ಅವರನ್ನು ವರ್ಗಾಯಿಸಲಾಗಿದೆ. ಇದರಿಂದ ಗೋವಾದಲ್ಲಿ ಅಕ್ರಮ ಮದ್ಯ ಸಾಗಣೆ ಹೆಚ್ಚಿದೆ ಎಂಬುದು ಕರವೇ ಆರೋಪ ಈ ಹಿನ್ನೆಲೆಯಲ್ಲಿ ಅವರನ್ನು ಮರು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಅಕ್ಷಯ ಎಸ್.ಬಿ.ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.