ಕಾರವಾರ: ಮಕ್ಕಳ ರಕ್ಷಣಾ ಘಟಕಕ್ಕೆ ತೆರಳುವ ಮೆಟ್ಟಿಲ ಮೇಲೆ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಆಲಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅದನ್ನು ತೆಗಿಸಿದ್ದಾರೆ. ಮೆಟ್ಟಿಲ ಮೇಲೆ ಹತ್ತುವವರ ಬುಜಕ್ಕೆ ತಾಗುವಂತೆ ಅಳವಡಿಸಿದ್ದ ಮೀಟರ್ ಜೊತೆ ತಂತಿಗಳು ಜೋಲುತ್ತಿದ್ದು, ಅಪಾಯವನ್ನು ದೂರ ಮಾಡಿದ ಬಗ್ಗೆ ಫೋಟೋ-ದಾಖಲೆಗಳೊಂದಿಗೆ ಅವರು ದೂರುದಾರರಿಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ.
ಜನಸಾಮಾನ್ಯರ ಕಲ್ಯಾಣ ಕೇಂದ್ರದವರು ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಜೊತೆಗೆ ಸಮಸ್ಯೆಯ ಬಗ್ಗೆ S News digital ಮೂಲಕ ವರದಿ ಪ್ರಕಟಿಸಿದ್ದರು. ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ತಂತಿಗಳಿರುವುದರಿoದ ಆ ಕಚೇರಿಗೆ ತೆರಳುವವರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ವಿವರಿಸಿದ್ದರು. ಈ ಬಗ್ಗೆ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸದ ಕಾರಣ ಜಿಲ್ಲಾಧಿಕಾರಿಗಳಿಗೆ ವಾಟ್ಸಪ್ ಮೂಲಕ ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾಪ್ರಿಯಾ ಈ ಬಗ್ಗೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಅಧಿಕಾರಿಗಳು ವಿದ್ಯುತ್ ಮೀಟರ್’ನ್ನು ಅಪಾಯದ ಪ್ರದೇಶದಿಂದ ತೆಗೆದು ಬೇರೆ ಕಡೆ ಅಳವಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅವರು ವರದಿ ನೀಡಿದ್ದು, `ನೀವು ಸೂಚಿಸಿದ ಕೆಲಸವನ್ನು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಅವರಿಗೆ ವಾಟ್ಸಪ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಜಿಲ್ಲಾಡಳಿತದ ವಾಟ್ಸಪ್ ದೂರು ಸಂಖ್ಯೆ: 9483511015
S News digital ವರದಿ ಪ್ರಸಾರ ಸಂಖ್ಯೆ: 9844206314