ಹೊನ್ನಾವರ: `ಅರಣ್ಯವಾಸಿಗಳ ಭೂಮಿ ಮತ್ತು ಸಾಗುವಳಿ ಹಕ್ಕಿನ ವಿಷಯವಾಗಿ ಅರಣ್ಯಧಿಕಾರಿಗಳಿಗೆ ಕಾನೂನು ಅಧ್ಯಯನವಿಲ್ಲ. ಹೀಗಾಗಿ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಎಡವುತ್ತಿದ್ದಾರೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಹೊನ್ನಾವರ ತಾಲೂಕಿನ ನಾಮಧಾರಿ ಕಲ್ಯಾಣ ಮಂಟಪದ ಸಭಾಭವನದಲ್ಲಿ ಜರುಗಿದ ಅರಣ್ಯವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು `ಅರಣ್ಯವಾಸಿಗಳ ಬದುಕಿನ ಅಸ್ತಿತ್ವ ಅರಣ್ಯ ಭೂಮಿ ಹಕ್ಕಿನ ಮೇಲೆ ಅವಲಂಬಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯು ಅರಣ್ಯ ಜಿಲ್ಲೆಯಾಗಿದೆ. ಸುಮಾರು 85,000 ಕುಟುಂಬವು ಭೂಮಿ ಹಕ್ಕಿನ ನಿರೀಕ್ಷೆಯಲ್ಲಿದ್ದು, ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳ ಪರ ನಿಲುವನ್ನು ಹೊಂದಿರಬೇಕು’ ಎಂದರು.
ಸುರೇಶ್ ಮೇಸ್ತಾ, ಗಿರೀಶ್ ಚಿತ್ತಾರ, ರಾಮ ಮರಾಠಿ ಯಲಕೊಟಗಿ, ಮಹೇಶ ನಾಯ್ಕ ಕಾನಕ್ಕಿ, ಗಜಾನನ ನಾಯ್ಕ ಸಾಲ್ಕೋಡ, ಜನಾರ್ಧನ್ ನಾಯ್ಕ ಹೊದಕೆ ಶಿರೂರು, ಸುರೇಶ ನಾಯ್ಕ ಗೆರಸೋಪ್ಪ , ದಾವೂದ್ ಇದ್ದರು.
ಡಿಸೆಂಬರ್ 21ರ ಸಭೆ ಚರ್ಚೆ
ಅರಣ್ಯವಾಸಿಗಳ ಸಮಸ್ಯೆ ಸ್ಪಂದನೆಗೆ ಡಿ.21 ಶನಿವಾರ ಹೊನ್ನಾವರ ತಾಲೂಕಿನ ವಲಯ ಅರಣ್ಯ ಕಛೇರಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆಯನ್ನು ನಿರ್ಧರಿಸಲಾಗಿದೆ. ಆಸಕ್ತರು ಆಗಮಿಸಲು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.