ಶಿರಸಿ: ಶಿರಸಿ-ಕುಮಟಾ ರಸ್ತೆಯ ವಡ್ಡಗೇರಿ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ 71 ವರ್ಷದ ವೃದ್ಧರೊಬ್ಬರಿಗೆ ಗಾಯವಾಗಿದೆ. ಈ ಅಪಘಾತಕ್ಕೆ ಕಾರಣರಾದ 75 ವರ್ಷದ ವೃದ್ಧರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಡಿ 20ರಂದು ಸಂಜೆ ಶಿರಸಿಯ ಹಣಗಾರಿನ ನಿವೃತ್ತ ಶಿಕ್ಷಕ ಗಜಾನನ ಹೆಗಡೆ (75) ಶಿರಸಿ-ಕುಮಟಾ ಮಾರ್ಗವಾಗಿ ಕಾರು ಓಡಿಸುತ್ತಿದ್ದರು. ತಮ್ಮ ವೆಗನಾರ್ ಕಾರನ್ನು ಎಂದಿಗಿAತ ತುಸು ಜೋರಾಗಿ ಓಡಿಸುತ್ತಿದ್ದ ಅವರು ವಡ್ಡಗೇರಿ ಕ್ರಾಸಿನ ಬಳಿ ಹಾದಿ ತಪ್ಪಿದರು.
ಅಲ್ಲಿಯವರೆಗೂ ತಮ್ಮ ಎಡಬದಿಗೆ ಕಾರು ಓಡಿಸುತ್ತಿದ್ದ ಅವರು ಏಕಾಏಕಿ ಬಲಗಡೆ ಕಾರು ತಿರುಗಿಸಿದ್ದು, ಎದುರಿನಿಂದ ಬೈಕ್ ಓಡಿಸಿಕೊಂಡು ಬರುತ್ತಿದ್ದ ಊರತೋಟ ತುಂಬೆಮನೆಯ ರಾಮಚಂದ್ರ ಹೆಗಡೆ (71) ಅವರಿಗೆ ಗುದ್ದಿದರು.
ಕಾರು ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದ ರಾಮಚಂದ್ರ ಹೆಗಡೆ ನೆಲಕ್ಕೆ ಬಿದ್ದರು. ಅವರ ಮೈಮೇಲೆ ಬೈಕು ಬಿದ್ದಿತು. ಇದರಿಂದ ರಾಮಚಂದ್ರ ಹೆಗಡೆ ಮೈ-ಕೈಗಳಿಗೆ ಪೆಟ್ಟು ಮಾಡಿಕೊಂಡರು. ಈ ಅಪಘಾತದ ಬಗ್ಗೆ ಗೋಳಿಗದ್ದೆಯ ಅಶೋಕ ಭಟ್ಟರು ಪೊಲೀಸ್ ಪ್ರಕರಣ ದಾಖಲಿಸಿದ್ದು, ಈ ಇಳಿ ವಯಸ್ಸಿನಲ್ಲಿ ರಾಮಚಂದ್ರ ಹೆಗಡೆ ಹಾಗೂ ಗಜಾನನ ಹೆಗಡೆ ನ್ಯಾಯಾಲಯ ತಿರುಗಾಟ ಮಾಡಬೇಕಿದೆ.
ಸಂಚಾರಿ ನಿಯಮ ಪಾಲಿಸಿ: ಬೇರಯವರ ಜೀವವನ್ನು ರಕ್ಷಿಸಿ