ಹೊನ್ನಾವರ: ಚಂದಾವರದ ಸುಲ್ತಾನಿ ಮಸೀದಿಯ ಮೌಲ್ವಾನ ಹುದ್ದೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಮಮ್ಮದ ವಸೀವುಲ್ಲಾ ನಿಜಾಮಿ ಆಲಂ ಎಂಬಾತರ ನೇಮಕ ನಡೆದಿದೆ. ಇದನ್ನು ವಿರೋಧಿಸಿದ 12 ಜನರ ಗುಂಪು ಅಲ್ಲಿ ಧಾಂದಲೆ ನಡೆಸಿದೆ.
ಅಕ್ಟೊಬರ್ 24ರಂದು ಮೌಲಾನ ಹುದ್ದೆಯ ನೇಮಕಾತಿ ನಡೆದಿದ್ದು, ಹೊಸದಾಗಿ ಬಂದ ಮಹಮದ್ ವಸಿವುಲ್ಲಾ ನಿಜಾಮಿ ಆಲಂ ಅವರಿಗೆ ನಮಾಜ್ ಬೋಧಿಸಲು ಕೆಲವರು ಅವಕಾಶ ಕೊಟ್ಟಿಲ್ಲ. ಮೌಲಾನ್’ಗೆ ನಿಂದಿಸಿ ಬೆದರಿಕೆ ಒಡ್ಡಿದ ಬಗ್ಗೆ ಚಂದಾವರದ ಜಮಾತುನ್ ಮುಸ್ಲಿಂ ಕಮಿಟಿ ಅಧ್ಯಕ್ಷ ಅಸೀಪ್ ಅಲಿ ಅಬ್ದುಲ್ ಗಫಾರ್ ಘನಿ ಪೊಲೀಸ್ ದೂರು ನೀಡಿದ್ದಾರೆ.
`ನ 3ರಂದು ಅಧ್ಯಕ್ಷ ಮೌಲಾನನನ್ನು ಮಸೀದಿಗೆ ಕರೆದುಕೊಂಡು ಹೋದಾಗ ಅಲ್ಲಿದ್ದ 12 ಜನ ತೊಂದರೆ ಮಾಡಿದರು. ಪ್ರಶ್ನಿಸಿದ ತನಗೂ ಜೀವ ಬೆದರಿಕೆ ಒಡ್ಡಿದರು’ ಎಂದು ಕಮಿಟಿ ಅಧ್ಯಕ್ಷ ಅಸೀಪ್ ಅಲಿ ಅಬ್ದುಲ್ ಗಫಾರ್ ಘನಿ ಆರೋಪಿಸಿದ್ದಾರೆ.
ಇಮಾಮ್ ಜೈನುದೀನ್ ಘನಿ, ನಯಾಜ ಮುಸೀರ ಮುಲ್ಲಾ, ಸುಲ್ತಾನಿ ಮೊಹಲ್ಲಾ ಚಂದಾವರ, ಅಬ್ದುಲ್ ರಶೀದ ಅಬ್ದುಲ್ ಖಾದರ ಘನಿ, ಮೊಹಮ್ಮದ ಅನ್ವರ ಶಬುದ್ದಿನ್ ಮುಲ್ಲಾ, ಮಹಮ್ಮದ ಶರೀಪ್ ಅಬ್ದುಲ್ ಖಾದರ, ರಹಮಾನ್ ಜೈನುದ್ದಿನ್ ಘನಿ, ಶಾಬುದ್ದಿನ್ ಇಕ್ಬಾಲ್ ಮುಲ್ಲಾ, ಮಾಮುಸಾಬ್ ಅಬ್ದುಲ್ ಖಾದರ ಸಂಶಿ, ಅಮ್ಜದ ಅದಂಖಾನ್, ಅಮ್ಜದ ಅಲಿ, ಅಬ್ದುಲ್ ಜಲೀಲ್ ಕೊಟೇಬಾಗಿಲ್, ಅಬ್ಜಲ್ ಅದಂ ಖಾನ್, ಮುತಲಿಫ್ ಅಬ್ದುಲ್ ಖಾದರ್ ಸಂಶಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.