ಭಟ್ಕಳ: ಪುಣ್ಯ ಹಾಗೂ ಪ್ರವಾಸಿ ತಾಣವಾದ ಮುರುಡೇಶ್ವರಕ್ಕೆ ಕನ್ನಡ ಚಲನಚಿತ್ರ ನಟಿ ಪೂಜಾ ಗಾಂಧಿ ಭೇಟಿ ನೀಡಿದ್ದಾರೆ. ದೇವರ ದರ್ಶನ ಮಾಡಿದ ಅವರು ಕಡಲತೀರವನ್ನು ನೋಡಿ, ಇಲ್ಲಿನ ಸೌಂದರ್ಯವನ್ನು ಕೊಂಡಾಡಿದ್ದಾರೆ.
ಉತ್ತರ ಪ್ರದೇಶದ ಪೂಜಾ ಗಾಂಧಿ ಅವರಿಗೆ ಕನ್ನಡದ ಬಗ್ಗೆ ಅಪಾರ ಅಭಿಮಾನ. `ಮುಂಗಾರು ಮಳೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸ್ಪಷ್ಟವಾದ ಕನ್ನಡವನ್ನು ಅವರು ಮಾತನಾಡುತ್ತಾರೆ. ಕನ್ನಡದ ಹುಡುಗನನ್ನು ಅವರು ಮದುವೆಯಾಗಿದ್ದಾರೆ. ಇದೀಗ ಉತ್ತರ ಕನ್ನಡ ಪ್ರವಾಸ ಮಾಡಿದ ಅವರು ಇಲ್ಲಿನ ಪೃಕೃತಿ ಸೌಂದರ್ಯದ ಬಗ್ಗೆ ತಮ್ಮ ಸಾಮಾಜಿಕ ಖಾತೆಯಲ್ಲಿ ಬಣ್ಣಿಸಿದ್ದಾರೆ.
ಪೂಜಾ ಗಾಂಧಿ ಅವರ ಮನೆಗೆ ಉತ್ತರ ಪ್ರದೇಶದಿಂದ ಅವರ ಸಹೋದರಿ ಆಗಮಿಸಿದ್ದು, ಅವರ ಜೊತೆ ಪೂಜಾ ಗಾಂಧಿ ಅವರು ಭಟ್ಕಳದ ಮುರುಡೇಶ್ವರ, ಹೊನ್ನಾವರದ ಇಡಗುಂಜಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಆರಕ್ಷಕ ಸಿಬ್ಬಂದಿ ಹಾಗೂ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಅವರು ಹಂಚಿಕೊ0ಡಿದ್ದಾರೆ.