ಕುಮಟಾ: ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಬೀಡಾಡಿ ಹಂದಿಗಳನ್ನು ತುಮಕೂರಿಗೆ ಕಳುಹಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಅವಿತಿರುವ ಹಂದಿಗಳನ್ನು ಪುರಸಭೆ ಹಿಡಿಯುತ್ತಿದೆ.
ಹಂದಿಗಳ ಕಾಟದಿಂದ ನಿತ್ಯ ಒಂದಿಲ್ಲೊoದು ಅಪಘಾತ ನಡೆಯುತ್ತಿದ್ದು, ಹಂದಿಗಳನ್ನು ನಿಯಂತ್ರಿಸುವAತೆ ಜನ ಆಗ್ರಹಿಸಿದ್ದರು. ಹಂದಿ ಮಾಲಕರಿಗೆ ಪುರಸಭೆ ಸೂಚನೆ ನೀಡಿದ್ದರೂ ಅವುಗಳ ಬಗ್ಗೆ ಮಾಲಕರು ಕಾಳಜಿವಹಿಸಿರಲಿಲ್ಲ. ಈ ಹಿನ್ನಲೆ ಸಾರ್ವಜನಿಕ ಹಿತ ಕಾಪಾಡುವುದಕ್ಕಾಗಿ ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸಲಾಯಿತು.
ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ಪ್ರಮುಖ ಪ್ರದೇಶಗಳಲ್ಲಿನ ಹಂದಿಗಳನ್ನು ತುಮಕೂರಿನಿಂದ ಬಂದ ತಂಡದವರು ಹಿಡಿದರು. ಲಾರಿ ತುಂಬಿಸಿ ಅವುಗಳನ್ನು ಬೇರೆ ಕಡೆ ಸಾಗಿಸಿದರು. ಮೊದಲ ದಿನ 15ಕ್ಕೂ ಅಧಿಕ ಹಂದಿಗಳು ಬಲೆಗೆ ಬಿದ್ದಿದ್ದು, ಇನ್ನಷ್ಟು ಹಂದಿಗಳನ್ನು ಹಿಡಿಯಲಾಗುತ್ತದೆ.