ಕಾರವಾರ: ಪದ್ಮಶ್ರೀ ತುಳಸಿ ಗೌಡ ಅವರ ನಿಧನಕ್ಕೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಕಂಬನಿ ಮಿಡಿದಿದ್ದಾರೆ. `ತುಳಸಿ ಗೌಡ ಅವರ ನೆನಪಿನಲ್ಲಿ ಪ್ರತಿಯೊಬ್ಬರು ಒಂದಾದರೂ ಗಿಡ ನೆಟ್ಟು ಬೆಳಸಬೇಕು. ಆ ಮೂಲಕ ಅವರ ನೆನಪನ್ನು ಸದಾ ಹಸಿರಾಗಿರಿಸಬೇಕು’ ಎಂದು ಗಣಪತಿ ಉಳ್ವೇಕರ್ ಅವರು ಜನತೆಗೆ ಮನವಿ ಮಾಡಿದ್ದಾರೆ.
`ತನ್ನ ಬದುಕಿನ ಉದ್ದಕ್ಕೂ ಗಿಡ-ಮರಗಳ ಆರೈಕೆಯಲ್ಲಿ ತೊಡಗಿದ್ದ ತುಳಸಿ ಗೌಡ ಅವರ ಬದುಕು ಎಲ್ಲರಿಗೂ ಆದರ್ಶ. ಹಿಂದುಳಿದ ಹಾಲಕ್ಕಿ ಸಮಾಜದಲ್ಲಿ ಹುಟ್ಟಿ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಅವರ ಸಾಧನೆ ಎಲ್ಲರಿಗೂ ಪ್ರೇರಣೆ’ ಎಂದವರು ಸ್ಮರಿಸಿದ್ದಾರೆ.
`ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ಅವರ ಸಾವು ಅತೀವ ನೋವು ತಂದಿದ್ದು, ಅವರ ಕುಟುಂಬಕ್ಕೆ ದೇವರು ಅಗಲುವಿಕೆಯನ್ನು ಸಹಿಸುವ ಶಕ್ತಿ ನೀಡಲಿ’ ಎಂದು ಗಣಪತಿ ಉಳ್ವೇಕರ್ ಪ್ರಾರ್ಥಿಸಿದ್ದಾರೆ.