ಅಂಕೋಲಾ: ನಾಡವರ ಸಭಾ ಭವನದ ಬಳಿಯ ಕಟ್ಟೆಯ ಮೇಲೆ ಕುಳಿತು ಮಟ್ಕಾ ಆಡಿಸುತ್ತಿದ್ದ ಪ್ರಶಾಂತ ನಾಯ್ಕರ ಜೂಜಾಟಕ್ಕೆ ಪೊಲೀಸ್ ಉಪನಿರೀಕ್ಷಕ ಸುನಿಲ ಹುಲ್ಲೊಳ್ಳಿ ತಡೆ ಒಡ್ಡಿದ್ದಾರೆ.
ಕೇಣಿಯ ಪ್ರಶಾಂತ ನಾಯ್ಕ ಗೂಡಂಗಡಿ ನಡೆಸುತ್ತಾರೆ. ಇದರ ಜೊತೆ ಮಟ್ಕಾ ಆಡಿಸುವುದು ಅವರ ಖಯಾಲಿ. ಡಿ 20ರಂದು ಬಸ್ ನಿಲ್ದಾಣದಿಂದ ಪಿಕಾಕ್ ಬಾರ್ ಕಡೆ ಹೋಗುವ ರಸ್ತೆಯಲ್ಲಿ ಅಲೆದಾಡುತ್ತಿದ್ದ ಅವರು ನಾಡವರ ಸಭಾ ಭವನದ ಬಳಿಯ ಕಟ್ಟೆಯ ಮೇಲೆ ಕುಳಿತು ಮಟ್ಕಾ ಆಡುವಂತೆ ಜನರನ್ನು ಪ್ರಚೋದಿಸುತ್ತಿದ್ದರು.
`1 ರೂಪಾಯಿಗೆ 80ರೂ ಕೊಡುವೆ’ ಎಂದು ನಂಬಿಸಿ ಹಣ ಪಡೆಯುತ್ತಿದ್ದರು. ಇದನ್ನು ಅರಿತ ಪೊಲೀಸ್ ಉಪನಿರೀಕ್ಷಕ ಸುನಿಲ ಹುಲ್ಲೊಳ್ಳಿ ದಾಳಿ ನಡೆಸಿದಾಗ ಜನರಿಂದ ಸಂಗ್ರಹಿಸಿದ್ದ 1510 ರೂ ಹಣ ಸಿಕ್ಕಿತು. ಜೊತೆಗೆ ಮಟ್ಕಾ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.