ಯಲ್ಲಾಪುರ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅವರಿಗೆ ಸವಣಗೇರಿ ಗ್ರಾಮಸ್ಥರು ಸನ್ಮಾನಿಸಿದರು.
ಸಂಜೀವಕುಮಾರ ಹೊಸ್ಕೇರಿ ಅವರು ಕಳೆದ 2 ವರ್ಷಗಳಿಂದ ಸವಣಗೇರಿ ಶಾಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಮುಖ್ಯಾಧ್ಯಪಕರಾಗಿರುವ ಅವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಕಾರ್ತಿಕ ದೀಪಪೋತ್ಸವ, ಭಗವದ್ಘೀತಾ ಅಭಿಯಾನವನ್ನು ಸಹ ಅವರು ನಡೆಸಿದ್ದು ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರಯುತ ಶಿಕ್ಷಣ ದೊರಕಿಸಿಕೊಡುವಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ.
ಶಾಲೆಯಲ್ಲಿ ಡಿಜಿಟಲ್ ಸೌಕರ್ಯ ಅಳವಡಿಕೆ ಹಾಗೂ ಕಂಪ್ಯುಟರ್ ಕಲಿಕೆಗೂ ಒತ್ತು ನೀಡಲಾಗಿದೆ. `ಶಾಲಾ ಎಸ್ಡಿಎಂಸಿ ಹಾಗೂ ಶಿಕ್ಷಕರ ಸಹಕಾರದಿಂದ ಶಾಲೆ ಅಭಿವೃದ್ಧಿ ಸಾಧ್ಯವಾಯಿತು. ಎಲ್ಲರ ಸಹಕಾರದಿಂದ ನೌಕರರ ಸಂಘದ ಅಧ್ಯಕ್ಷನಾಗಿದ್ದು, ಮಕ್ಕಳ ಕೌಶಲ್ಯವೃದ್ಧಿಗೆ ಸದಾ ಬದ್ಧ’ ಎಂದು ಸಂಜೀವಕುಮಾರ ಹೊಸ್ಕೇರಿ ಪ್ರತಿಕ್ರಿಯಿಸಿದರು.
ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆ ಅವರಿಗೆ ಸ್ಥಳೀಯರಾದ ಗೋಪಾಲಕೃಷ್ಣ ಭಟ್ಟ, ರವಿ ನಾಯ್ಕ, ಕೃಷ್ಣ ಹೆಗಡೆ, ಸುಬ್ಬಣ್ಣ ಉದ್ದಾಬೈಲ್, ಶಿಕ್ಷಕರಾದ ಗೀತಾ ನಾಯ್ಕ, ಪುರ್ಣಿಮಾ ನಾಯ್ಕ, ಪವಿತ್ರಾ ಆಚಾರಿ, ಗೀತಾ ಪಟಗಾರ ಇತರರು ಗೌರವಿಸಿದರು.