ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿವಿಧ ಕಡೆ ಮಾರ್ಚ 11ರಿಂದ 15ರವೆರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಮತ್ತು ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೆ ಬರಲಿದೆ.
Geotechnical Investigation Work ಕಾಮಗಾರಿ ಸಂಬoಧ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮಾರ್ಚ್ 11ರ ಬೆಳಗ್ಗೆ 6 ಗಂಟೆಯಿAದ ಮಾರ್ಚ್ 15ರ ಸಂಜೆ 6 ಗಂಟೆಯವರೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163ರನ್ವಯ ನಿಬಂಧನಗೊಳಪಟ್ಟು ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.
ಈ ಅವಧಿಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ಜನ ಒಂದಡೆ ಸೇರುವುದು ನಿಷಿದ್ಧ. ಧರಣಿ ಅಥವಾ ಪ್ರತಿಭಟನೆ ನಡೆಸುವುದಕ್ಕೂ ಕಡಿವಾಣ ಹಾಕಲಾಗಿದೆ. ಘೋಷಣೆ ಕೂಗುವುದು ಸಹ ಕಾನೂನುಬಾಹಿರವಾಗುತ್ತದೆ. ಉಳಿದಂತೆ ಯಾವುದೇ ಬಗೆಯ ಆಯುಧ, ದೊಣ್ಣೆ, ಕತ್ತಿ-ಬಂದೂಕು ಹಿಡಿದು ಸಂಚರಿಸುವುದು ಹಾಗೂ ಸ್ಪೋಟಕಗಳ ಬಳಕೆ ಜೊತೆ ಸಾಗಾಟವನ್ನು ನಿಷೇಧಿಸಲಾಗಿದೆ.