ಆಸ್ತಿ ವಿಷಯವಾಗಿ ಸಂಬoಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರಮೇಶ ಪಾವಲೆಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಜೊತೆಗೆ 19 ಸಾವಿರ ರೂ ದಂಡ ಪಾವತಿಸುವಂತೆಯೂ ಸೂಚಿಸಿದೆ.
ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಮಾರ್ಕೇಟ್ ರಸ್ತೆಯ ರಮೇಶ ಪಾವಲೆ ಹಾಗೂ ದೇವಿದಾಸ ಪಾವಲೆ ಎಂಬ ಸಹೋದರರ ನಡುವೆ ಆಸ್ತಿ ಸರಿಯಾಗಿ ವಿಭಾಗ ಆಗಿರಲಿಲ್ಲ. ಸಹೋದರಿಯರಿಗೆ ಸಹ ಆಸ್ತಿ ಭಾಗ ಸಮಾನ ಹಂಚಿಕೆ ನಡೆದಿರಲಿಲ್ಲ. ಇದೇ ವಿಷಯ ವೈಮನಸ್ಸಿಗೆ ಕಾರಣವಾಗಿತ್ತು. `ವಾಸದ ಮನೆಯಲ್ಲಿ ಪಾಲು ಬೇಕು’ ಎಂದು ರಮೇಶ ಪಾವಲೆ ತಕರಾರು ಸಲ್ಲಿಸಿದ್ದು, ಇದಕ್ಕೆ ದೇವಿದಾಸ ಪಾವಲೆ ಒಪ್ಪಿರಲಿಲ್ಲ.
2020ರ ಮೇ 29ರಂದು ದೇವಿದಾಸ ಪಾವಲೆ ಅವರ ಶೌಚಾಲಯ ನಿರ್ಮಿಸುತ್ತಿರುವಾಗ ರಮೇಶ ಪಾವಲೆ ಕೆಲಸಕ್ಕೆ ಅಡ್ಡಿಪಡಿಸಿದ್ದರು. ಇದೇ ವಿಷಯವಾಗಿ ಜಗಳ ನಡೆದಿದ್ದು, ದೇವಿದಾಸರ ಪತ್ನಿ ಸುಜಾತಾ ಪಾವಲೆ ಮೇಲೆ ದಾಳಿ ಮಾಡಿದ್ದರು. ಕತ್ತಿ ಬೀಸಿ ಅವರನ್ನು ಗಾಯಗೊಳಿಸಿದ್ದರು. ತಪ್ಪಿಸಲು ಬಂದ ಸಂದೀಪ ಗಾವಳೆ ಅವರಿಗೂ ನಿಂದಿಸಿದ್ದರು. ಹೊಡೆದಾಟ ನಿಲ್ಲಿಸಲು ತೆರಳಿದ ಓಂ ಪಾವಳೆ ಅವರಿಗೂ ದೇವಿದಾಸ ಪಾವಲೆ ಕತ್ತಿ ಬೀಸಿದ್ದರು.
ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಮನಗರ ಪಿಎಸ್ಐ ಕಿರಣ ಪಾಟೀಲ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ರಾಜೇಶ ಮಳಗಿಕರ್ ವಾದ ಮಂಡಿಸಿದರು. ಈ ಹಿನ್ನಲೆ ಶಿರಸಿಯ 1ನೇ ಅಧಿಕ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕೇಣಿ ಆದೇಶ ಹೊರಡಿಸಿದರು. ಸಂತ್ರೆಸ್ತೆಗೂ 10 ಸಾವಿರ ರೂ ಪರಿಹಾರ ಒದಗಿಸಬೇಕು ಎಂದವರು ಸೂಚಿಸಿದರು.