BSNL ಕಚೇರಿ ವ್ಯವಸ್ಥೆ ಇದೀಗ ಡಿಜಿಟಲೀಕರಣಗೊಂಡಿದ್ದು, ಕಾಗದದ ಅರ್ಜಿ ಭರ್ತಿ ಮಾಡಿ ಮೊಬೈಲ್ ಸಿಮ್ ಪಡೆದ ಎಲ್ಲರೂ ಡಿಜಿಟಲ್ ಮೋಡ್ ಮೂಲಕ ತಮ್ಮ ಗುರುತು ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಗೆ ಯಾವುದೇ ಶುಲ್ಕವಿಲ್ಲ. ಆದರೆ, ಕಚೇರಿ ಓಡಾಟ ಅನಿವಾರ್ಯ!
ಈ ಗುರುತು ಮರು ಪರಿಶೀಲನೆ ಅಸ್ತಿತ್ವದಲ್ಲಿರುವ ಗ್ರಾಹಕರನ್ನು ದೃಢೀಕರಿಸುತ್ತದೆ. ಹೀಗಾಗಿ ಎಲ್ಲಾ BSNL ಗ್ರಾಹಕರು ತಮ್ಮ ಅಧಿಕೃತ ಗುರುತು ಚೀಟಿಯೊಂದಿಗೆ BSNL ಕಚೇರಿ ಅಥವಾ ಪ್ರಾಂಚೈಸಿಗೆ ಭೇಟಿ ನೀಡಬೇಕಿದೆ. ಹೀಗೆ ಹೋಗುವಾಗ ಸಂಬOಧಿಸಿದ ಬಿಎಸ್ಎನ್ಎಲ್ ಸಿಮ್ ಹೊಂದಿದ ಮೊಬೈಲ್ ತೆಗೆದುಕೊಂಡು ಹೋಗಲು ಮರೆಯಬೇಡಿ!
ಆಧಾರ್ ಕಾರ್ಡ, ವೋಟರ್ ಕಾರ್ಡ ಅಥವಾ ಡ್ರೈವಿಂಗ್ ಲೈಸನ್ಸ ಮೂಲ ಪ್ರತಿಯೊಂದಿಗೆ ಕಚೇರಿಗೆ ಹೋಗಬಹುದು. ಅದನ್ನು ಕಚೇರಿ ಸಿಬ್ಬಂದಿಗೆ ನೀಡಿದ ನಂತರ ಮೊಬೈಲಿಗೆ ಓಟಿಪಿ ಬರಲಿದ್ದು, ನಿಮ್ಮ ಗುರುತು ಬಿಎನ್ಎನ್ಎಲ್ ತಂತ್ರಾ0ಶದಲ್ಲಿ ದಾಖಲಾಗಲಿದೆ. ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿಕೊಳ್ಳುವುದು ಉತ್ತಮ.
ಉಚಿತ ಸಿಮ್
ಕಾರವಾರದಲ್ಲಿ ಅಸ್ತಿತ್ವದಲ್ಲಿರುವ ಬಿಎಸ್ಎನ್ಎಲ್ 2g ಹಾಗೂ 3ಜg ಗ್ರಾಹಕರಿಗೆ ಉಚಿತವಾಗಿ 4G ಸಿಮ್ ನೀಡಲಾಗುತ್ತಿದೆ. ಅಗತ್ಯವಿದ್ದವರು ಇದನ್ನು ಪಡೆಯಬಹುದು.