ಯಲ್ಲಾಪುರ: ಮಂಚಿಕೇರಿಯ ಸಂಜೀವಿನಿ ಒಕ್ಕೂಟದವರು ಲಿಂಗತ್ವ ಆಧಾರಿತ ದೌರ್ಜನ್ಯದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಬ್ರೂಣ ಹತ್ಯೆ, ಮಕ್ಕಳ ಮಾರಾಟ ಸೇರಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹದ ಬಗ್ಗೆ ಅವರು ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಅರಿವು ಮೂಡಿಸಿದರು.
ಮಂಚಿಕೇರಿಯ ಕೃಷಿ ಇಲಾಖೆ ಹಿಂದಿನ ಸಂಜೀವಿನಿ ಕಚೇರಿಯಲ್ಲಿ ಸಂಘದ ಸದಸ್ಯರು ಜನ ಜಾಗೃತಿ ಮೂಡಿಸುವ ರಂಗೋಲಿಗಳನ್ನು ಚಿತ್ರಿಸಿದ್ದರು. `ಹೆಣ್ಣು ಮಕ್ಕಳನ್ನು ರಕ್ಷಿಸಿ’ ಎಂಬ ಬರಹಗಳನ್ನು ಮೂಡಿದ ರಂಗೋಲಿಗಳು ಗಮನಸೆಳೆದವು. ಅಪ್ರಾಪ್ತರ ಮೇಲಿನ ಅತ್ಯಾಚಾರ ಹಾಗೂ ಅದಕ್ಕೆ ವಿಧಿಸುವ ಶಿಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಹಿಳಾ ದೌರ್ಜನ್ಯದ ವಿರುದ್ಧ ಕಠಿಣ ಕಾನೂನುಗಳಿರುವ ಬಗ್ಗೆ ವಿವರಿಸಿದರು. ಕಂಪ್ಲಿ ಗ್ರಾಮ ಪಂಚಾಯತ ಸಹಯೋಗದಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆದಿದ್ದು, ಗ್ರಾ ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಗ್ರಾ ಪಂ ಪಿಡಿಓ ರವಿ ಪಟಗಾರ, ಕಾರ್ಯದರ್ಶಿ ಮಂಜುನಾಥ ಹೆಗಡೆ ಭಾಗವಹಿಸಿದ್ದರು.
ಬೋವಿ ಸಮಾಜದ ಮುಖಂಡ ಪಕೀರಪ್ಪ ಭೋವಿವಡ್ಡರ, ನಾಗರಾಜ ಬೋವಿವಡ್ಡರ್ ಅವರು ಲಿಂಗತ್ವ ಆಧಾರಿತ ದೌರ್ಜನ್ಯವನ್ನು ನಿವಾರಣೆಗೊಳಿಸುವುದಕ್ಕಾಗಿ ಸಂಜೀವಿನಿ ಒಕ್ಕೂಟದವರು ನಡೆಸುವ ಕಾರ್ಯಕ್ರಮವನ್ನು ಅವರು ಶ್ಲಾಘಿಸಿದರು.