`ಪರಿಶುದ್ಧ ಮನಸ್ಸು ಹೊಂದಿದವರ ಹೃದಯದಲ್ಲಿ ಭಗವಂತ ನೆಲೆಸಿರುತ್ತಾನೆ’ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಶ್ರೀಗಳು ಹೇಳಿದ್ದಾರೆ.
ಅವರು ಯಲ್ಲಾಪುರ ತಾಲೂಕಿನ ಯಡಳ್ಳಿಯ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ನಿರ್ಮಿಸಲಾಗುವ ಶಿಲಾಮಯ ದೇವಾಲಯ ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು.
ನಂತರ ಆಶೀರ್ವಚನ ನೀಡಿ `ಯಾರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಒಳ್ಳೆಯತನ ಹೊಂದಿರುತ್ತಾರೆಯೋ ಅವರೊಳಗೆ ದೇವರು ಸದಾ ನೆಲೆಸಿರುತ್ತಾನೆ’ ಎಂದರು. `ಯಡಳ್ಳಿಯ ದೇವಾಲಯದಲ್ಲಿ ಇಷ್ಟು ದಿನ ಮೃಣ್ಮಯನಾಗಿ ನೆಲೆಗೊಂಡಿದ್ದ ದೇವರು, ಇನ್ನು ಮುಂದೆ ಚಿನ್ಮಯನಾಗಿ ದೇವಾಲಯದಲ್ಲಿ ರಾರಾಜಿಸುತ್ತಾನೆ’ ಎಂದು ಹೇಳಿದರು.
ಗ್ರಾಮಸ್ಥರು ಶ್ರದ್ಧೆ, ಭಕ್ತಿಗಳಿಂದ ನಿರ್ಮಿಸಲು ಇಚ್ಚಿಸಿರುವ ಶಿಲಾಮಯ ಕಟ್ಟಡಕ್ಕೆ ಹಣ ಜಾಸ್ತಿ ಖರ್ಚಾದರೂ ಉತ್ತಮ ದೇಗುಲ ನಿರ್ಮಾಣ ನಿಶ್ಚಿತ. ಹೊರಗೆ ಶಿಲಾಮಯನಾಗಿ ಕಾಣಿಸುವ ದೇವರು ಒಳಗೆ ಶೀಲಮಯನಾಗಿ ನೆಲೆಗೊಳ್ಳುತ್ತಾನೆ’ ಎಂದರು.