ಆಗ್ರಾ: ಅಯೋಧ್ಯೆ ತಲುಪಬೇಕಿರುವ ರಾಮ ಧನಸ್ಸು ನೋಡಲು ಎಲ್ಲಡೆ ಜನ ಸಾಗರ ಸೇರುತ್ತಿದೆ.
ರಾಜಸ್ಥಾನದಿಂದ ಹೊರಟಿರುವ 1,100 ಕೆಜಿ ತೂಕದ ರಾಮ ಧನುಸ್ಸು ಜೊತೆ 1,600 ಕೆಜಿ ತೂಕದ ಗದೆ ಆಗ್ರಾ ತಲುಪಿದೆ. ರಾಜಸ್ಥಾನದ ಸುಮೇರ್ಪುರದ ಶ್ರೀಜಿ ಸನಾತನ ಸೇವಾ ಸಂಸ್ಥಾನದಿAದ ಯಾತ್ರೆಯ ಮೂಲಕ ರಾಮನಗರಿಗೆ ಕೊಂಡೊಯ್ಯಲಾಗುತ್ತಿದ್ದ ಗದೆ ಮತ್ತು ರಾಮ ಧನುಸ್ಸಿಗೆ ಶ್ರೀ ಮಂಕಮೇಶ್ವರ ಮಹಾದೇವ ದೇವಸ್ಥಾನದ ಮಹಂತ್ ಯೋಗೀಶ್ ಪುರಿ ಅವರು ವಿಧಿವಿಧಾನದಂತೆ ಪೂಜೆ ಸಲ್ಲಿಸಿದರು. ನಂತರ ಯಾತ್ರೆ ಮುಂದೆ ಹೊರಟಿದ್ದು, ಲಕ್ನೋ ತಲುಪಲಿದೆ.
ಜೂನ್ 12ರಂದು ಈ ಧನಸ್ಸು ಹಾಗೂ ಗಧೆ ರಾಜಸ್ಥಾನದಿಂದ ಹೊರಟಿದ್ದು, ರಾಮನವಮಿಯಿಂದಲೇ ಇವುಗಳ ನಿರ್ಮಾಣ ಕೆಲಸ ಆರಂಭವಾಗಿತ್ತು. ಪ್ರತಿದಿನ 24ಕ್ಕೂ ಹೆಚ್ಚು ಕುಶಲಕರ್ಮಿಗಳು ಇವುಗಳ ರಚನೆಗೆ ದುಡಿದಿದ್ದಾರೆ.
Discussion about this post