ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಹಿರೆಗುತ್ತಿಯ ಕಾಮುಕ ದಿನೇಶ ನಾಗರಾಜ ವೇಗಾಸ್’ನನ್ನು ಶನಿವಾರ ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.
ದಿನೇಶ ನಾಗರಾಜ ವೇಗಾಸ್ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ಮೂರು ತಿಂಗಳ ನಂತರ ಆ ಪ್ರಕರಣ ಬೆಳಕಿಗೆ ಬಂದಿದ್ದು, 18 ವರ್ಷ ತುಂಬುವ ಮೊದಲೇ ಆಕೆಯನ್ನು ಮದುವೆಯಾಗಿ ಇನ್ನೊಂದು ಅಪರಾಧ ಮಾಡಿದ್ದ. ಅದಾದ ನಂತರ ಆತ ತಲೆಮರೆಸಿಕೊಂಡಿದ್ದ.
ಬಾಲಕಿಯ ಆರೋಗ್ಯದಲ್ಲಿ ಏರುಪೇರಾದರೂ ಆತ ಊರಿಗೆ ಬಂದಿರಲಿಲ್ಲ. ಬಾಲಕಿಯನ್ನು ಕಾರವಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಾಲಕಿ ತಾಯಿ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಎಷ್ಟು ಹುಡುಕಿದರೂ ಆತ ಸಿಕ್ಕಿರಲಿಲ್ಲ.
ಕಳೆದ 40 ದಿನಗಳಿಂದ ಪೊಲೀಸರು ದಿನೇಶ ನಾಗರಾಜ ವೇಗಾಸ್’ನನ್ನು ಹುಡುಕುತ್ತಿದ್ದರು. ಶನಿವಾರ ಆತ ವಿಜಯಪುರದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾಗ ಅಪರಾಧ ವಿಭಾಗದ ಪಿಎಸ್ಐ ಶಶಿಧರ್ ಪತ್ತೆ ಮಾಡಿದರು. ಕೂಡಲೇ ಆತನನ್ನು ವಶಕ್ಕೆಪಡೆದು ಗೋಕರ್ಣಕ್ಕೆ ಕರೆ ತಂದರು.
ಪೊಲೀಸ್ ಸಿಬ್ಬಂದಿ ರಾಜೇಶ ನಾಯ್ಕ, ಶ್ರವಣಕುಮಾರ ಬಡಿಗೇರ, ಪರಮೇಶ್ವರ ಬೆಂಡ್ಲಗಟ್ಟಿ ಸೇರಿ ಕಾಮುಕ ದಿನೇಶ ನಾಗರಾಜ ವೇಗಾಸ್’ನನ್ನು ಬಂಧಿಸಿದರು.