ಯಲ್ಲಾಪುರ: ನಾಯ್ಕನಕೆರೆ ದತ್ತ ಮಂದಿರದ ಪ್ರತಿಷ್ಠಾಪನೆಗಾಗಿ ವಿವಿಧ ದೇವಾಲಯಗಳ ತೀರ್ಥ ಸಂಗ್ರಹ ಕಾರ್ಯ ಶುರುವಾಗಿದೆ. ರಥಯಾತ್ರೆಯ ಮೊದಲ ದಿನವಾದ ಬುಧವಾರ ಶಾರದಾಂಬಾ ದೇವಸ್ಥಾನ, ಗ್ರಾಮದೇವಿ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಹಿತ್ಲಳ್ಳಿ ಲಕ್ಷ್ಮೀ ನರಸಿಂಹ ದೇವಸ್ಥಾನ, ಕೋಟೆಮನೆ ಗಣಪತಿ ದೇವಸ್ಥಾನ, ಕಾಗಾರಕೊಡ್ಲುವಿನ ಸುಮೇರು ಜ್ಯೋತಿರ್ವನಗಳಿಗೆ ತೆರಳಿ ತೀರ್ಥ ಸಂಗ್ರಹಿಸಿದೆ.
ಈ ರಥಯಾತ್ರೆಯೂ ನವಂಬರ್ 28ರಂದು ಬೆಳಿಗ್ಗೆ 9ಗಂಟೆಗೆ ಕುಂದರಗಿ ಈಶ್ವರ ದೇವಾಲಯ, 9.30ಕ್ಕೆ ಮಾವಿನಕಟ್ಟಾ ಶ್ರೀಮಾರಿಕಾಂಬಾ ದೇವಾಲಯ, 10ಗಂಟೆಗೆ ಭರತನಹಳ್ಳಿ ಭ್ರಮರಾಂಬಾ ದೇವಾಲಯ, 11ಗಂಟೆಗೆ ಹೆಮ್ಮಾಡಿ ಶ್ರೀ ಕೋಟೇಶ್ವರ ದೇವಾಲಯಕ್ಕೆ ತೆರಳಲಿದೆ. ಮಧ್ಯಾಹ್ನ 12ಗಂಟೆಗೆ ಭರಣಿ ಶ್ರೀಮಾರಿಕಾಂಬಾ ದೇವಾಲಯ, 1ಗಂಟೆಗೆ ಬೆಳ್ಳಂಬಿ ಶ್ರೀಮಾರಿಕಾಂಬಾ ದೇವಾಲಯ, 3.30ಕ್ಕೆ ಮಂಚಿಕೇರಿ ದುರ್ಗಾಪರಮೇಶ್ವರಿ ದೇವಾಲಯ, 4ಕ್ಕೆ ಕಂಪ್ಲಿ ಮಹಿಷಾಸುರ ಮರ್ಧಿನಿ ದೇವಾಲಯ, 5ಗಂಟೆಗೆ ತುಂಬೇಬೀಡು ಈಶ್ವರ ದೇವಾಲಯ, 6ಕ್ಕೆ ಗೊರ್ಸಗದ್ದೆ ಗಣಪತಿ ಕಟ್ಟೆಗೆ ಆಗಮಿಸಲಿದೆ.
ನ. 29ರಂದು ಬೆಳಿಗ್ಗೆ 9 ಗಂಟೆಗೆ ಹುಣಶೆಟ್ಟಿಕೊಪ್ಪ ಗ್ರಾಮದೇವಿ ದೇವಾಲಯ, 10ಕ್ಕೆ ಹುಲಗೋಡು ಕರಿಯಮ್ಮ ದೇವಾಲಯ, 10.30ಕ್ಕೆ ಮಾದೇವಕೊಪ್ಪ ದೇವಾಲಯ, 11.30ಕ್ಕೆ ಕಿರವತ್ತಿ ಗ್ರಾಮದೇವಿ ದೇವಾಲಯ, 12ಗಂಟೆಗೆ ಡೊಮಗೆರೆ ದೇವಾಲಯಕ್ಕೆ ತೆರಳಲಿದೆ. ಮಧ್ಯಾಹ್ನ 1ಗಂಟೆಗೆ ಮಾವಳ್ಳಿ ಗ್ರಾಮದೇವಿ ದೇವಾಲಯ, 3.30ಕ್ಕೆ ಗಣೇಶ ಕಟ್ಟೆ, 4ಗಂಟೆಗೆ ಆನಗೋಡು ಸರ್ಕಲ್, 5ಗಂಟೆಗೆ ಆನಗೋಡು ಗೋಪಾಲಕೃಷ್ಣ ದೇವಾಲಯ, 5.30ಕ್ಕೆ ಬಿಸಗೋಡು ಆಂಜನೇಯ ದೇವಾಲಯ, 6ಗಂಟೆಗೆ ಕಟ್ಟಿಗೆ ಗಣೇಶ ಗುಡಿಗೆ ತೆರಳಲಿದೆ.
ನ 30ರಂದು ಬೆಳಿಗ್ಗೆ 9ಗಂಟೆಗೆ ಇಡಗುಂದಿ ರಾಮಲಿಂಗೇಶ್ವರ ದೇವಾಲಯ, 10ಗಂಟೆಗೆ ಚಿನ್ನಾಪುರ ಈಶ್ವರ, ಮಾರುತಿ ದೇವಾಲಯ, 10.30ಕ್ಕೆ ತೆಲಂಗಾರ ಭಗತ್ ಸಿಂಗ್ ಸರ್ಕಲ್, 11ಕ್ಕೆ ವಜ್ರಳ್ಳಿ ವೀರಭದ್ರೇಶ್ವರ ದೇವಾಲಯ, ಮಧ್ಯಾಹ್ನ 12.00ಕ್ಕೆ ಕಳಚೆ ಶ್ರೀನರಸಿಂಹ ದೇವಾಲಯ. 1ಕ್ಕೆ ಮಲವಳ್ಳಿ ರಾಮಲಿಂಗೇಶ್ವರ ದೇವಾಲಯ, ಮಧ್ಯಾಹ್ನ 4.30ಕ್ಕೆ ಅರಬೈಲ್, 5ಕ್ಕೆ ಗುಳ್ಳಾಪುರ, 5.30ಕ್ಕೆ ರಾಮನಗುಳಿಗೆ ರಥ ಸಂಚರಿಸಲಿದೆ.
ಡಿಸೆoಬರ್ 1ರಂದು ಬೆಳಿಗ್ಗೆ 9ಗಂಟೆಗೆ ಚಂದಗುಳಿ ಗಣಪತಿ ದೇವಾಲಯ, 11ಕ್ಕೆ ಅಣಲಗಾರ ಗೋಪಾಲಕೃಷ್ಣ ದೇವಾಲಯ, 12ಕ್ಕೆ ಬೆಳಖಂಡ ಗೋಪಾಲಕೃಷ್ಣ ದೇವಾಲಯ, ಮಧ್ಯಾಹ್ನ 1ಕ್ಕೆ ಕವಡಿಕೆರೆ ಕವಡಮ್ಮ ದೇವಾಲಯ, 4ಕ್ಕೆ ಹುಲ್ಲರಮನೆ ಶ್ರೀಗಣಪತಿ, ಆಂಜನೇಯ ದೇವಾಲಯ, 5ಕ್ಕೆ ಬಿಲ್ಲಿಗದ್ದೆ ರಾಮಲಿಂಗೇಶ್ವರ ದೇವಾಲಯ ಮಾರ್ಗಗಳಲ್ಲಿ ರಥ ಯಾತ್ರೆ ಸಂಚರಿಸಲಿದೆ.