ಕಾರವಾರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ರಥಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ.
ಕಾರವಾರದ ಪತಂಜಲಿ ಯೋಗ ಸಮಿತಿ, ರೋಟರಿ ಕ್ಲಬ್ ಆಫ್ ಕಾರವಾರ ಸಿಸೈಡ್ ಹಾಗೂ ಆಯುಷ್ ಇಲಾಖೆ ಈ ಕಾರ್ಯಕ್ರಮ ಸಂಘಟಿಸಿದೆ. ಫೆಬ್ರವರಿ 4ರ ಮಂಗಳವಾರ ಬೆಳಗ್ಗೆ 6ರಿಂದ 7ಗಂಟೆಯವರೆಗೆ ಕೋಡಿಭಾಗದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ 108 ಸೂರ್ಯ ನಮಸ್ಕಾರ ಮಾಡಲಾಗುತ್ತದೆ.
ಪತಂಜಲಿ ಯೋಗ ಸಮಿತಿಯ ತಾಲೂಕಾ ಪ್ರಭಾರಿ ವೆಂಕಟೇಶ ಗುರೂಜಿ ಅವರು ಸೂರ್ಯ ನಮಸ್ಕಾರ ಹೇಳಿಕೊಡಲಿದ್ದಾರೆ. ಯೋಗ ಸಾಧಕರಾದ ಸುಜಾತ ಹರಿಕಂತ್ರ, ಆಯುಷ್ ಇಲಾಖೆಯ ಡಾ ಮಲ್ಲಿಕಾರ್ಜುನ ಹಿರೇಮಠ ಸಹ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಆರೋಗ್ಯವಂತ ಜೀವನ ಹಾಗೂ ಸದಾ ಲವಲವಿಕೆಯಿಂದ ಬಾಳಲು ಯೋಗ, ಸೂರ್ಯ ನಮಸ್ಕಾರ ಉತ್ತಮ ಸಾಧನವಾಗಿದ್ದು, ಆಸಕ್ತರು ಆ ದಿನ ಬೆಳಗ್ಗೆ 5:45ಕ್ಕೆ ಜಮಖಾನದ ಜೊತೆ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಹಾಜರಾಗುವಂತೆ ರೋಟರಿ ಸಿ ಸೈಡ್ ಅಧ್ಯಕ್ಷರಾದ ಡಾ ಅನು ಜಯಪ್ರಕಾಶ್ ಅವರು ಕೋರಿದ್ದಾರೆ.
ನೀವು ಬನ್ನಿ.. ನಿಮ್ಮವರನ್ನು ಕರೆ ತನ್ನಿ