ಶಿರಸಿ: ಅರಣ್ಯ ವಿದ್ಯಾಲಯದ ಆವರಣದಲ್ಲಿ ಡಿ 23ರ ಬೆಳಗ್ಗೆ 10 ಗಂಟೆಗೆ ಸಿರಿಧಾನ್ಯಗಳ ಮೇಳ ನಡೆಯಲಿದೆ. ಇದರೊಂದಿಗೆ `ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ’ಯನ್ನು ಸಹ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳನ್ನುಹೊರತುಪಡಿಸಿ ಯಾರೂ ಬೇಕಾದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸಿರಿಧಾನ್ಯ ಬಳಸಿ ಅಡುಗೆ ತಯಾರಿಸುವುದು ಇಲ್ಲಿ ಕಡ್ಡಾಯ. ಸಸ್ಯಹಾರದಲ್ಲಿ ಸಿಹಿ ಅಥವಾ ಖಾರದ ಖಾದ್ಯಗಳನ್ನು ತಯಾರಿಸಬಹುದು. ಮಾಂಸಹಾರದ ಅಡುಗೆಗೆ ಅವಕಾಶವಿಲ್ಲ. ಅತ್ಯಂತ ಹಳೆಯ ಕಾಲದ ಈಗ ಅಪರೂಪವಾಗಿರುವ ಪುರಾತನ ಪದ್ಧತಿಯ ಖಾದ್ಯಗಳನ್ನು ಮಾಡಲು ಅವಕಾಶವಿದೆ.
ಇನ್ನೂ ಖಾದ್ಯವನ್ನು ಮನೆಯಿಂದಲೇ ಮಾಡಿಕೊಂಡು ಬರಬೇಕು. ಖಾದ್ಯ ತಯಾರಿಸಿದ ವಿಧಾನ, ಆಹಾರ ತಯಾರಿಸಲು ಬೇಕಾಗುವ ಸಮಯ ಹಾಗೂ ಅಗತ್ಯ ಸಾಮಗ್ರಿಗಳ ಬಗ್ಗೆ ಅರ್ಜಿಯಲ್ಲಿ ಬರೆಯಬೇಕು. ಸ್ಪರ್ಧಾಳುಗಳ ಹೆಸರು, ಫೋಟೋ ಅರ್ಜಿಯಲ್ಲಿ ನಮೂದಿಸುವುದು ಕಡ್ಡಾಯ. ಶಿರಸಿ ಅರಣ್ಯ ವಿದ್ಯಾಲಯಕ್ಕೆ ಆಗಮಿಸಿದ ನಂತರವೂ ಅರ್ಜಿ ಭರ್ತಿ ಮಾಡಲು ಅವಕಾಶವಿದೆ. ಜಂಟಿ ಕೃಷಿ ನಿರ್ದೇಶಕರು, ಕಾರವಾರ ಎಂಬ ವಿಳಾಸಕ್ಕೆ ಈ ಎಲ್ಲಾ ಮಾಹಿತಿಯನ್ನು ಅಂಚೆ ಮೂಲಕವೂ ಕಳುಹಿಸಬಹುದು.
ಇನ್ನೂ ಖಾದ್ಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದವರಿಗೆ 5 ಸಾವಿರ ರೂ ಬಹುಮಾನ ನೀಡಲಾಗುತ್ತಿದೆ. ದ್ವಿತೀಯ ಬಹುಮಾನ 3 ಸಾವಿರ ರೂ ಹಾಗೂ 3ನೇ ಬಹುಮಾನ 2 ಸಾವಿರ ರೂಪಾಯಿಗಳಿದೆ. ಈ ಖಾದ್ಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದವರಿಗೆ ರಾಜ್ಯಮಟ್ಟದ ಖಾದ್ಯ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಹಳೆ ಕಾಲದ ಅಡುಗೆ ತಯಾರಿಕೆಗೆ ನೀವು ಆಸಕ್ತರಾ? ಹಾಗಾದರೆ, ಇನ್ನಷ್ಟು ಮಾಹಿತಿಗೆ ಇಲ್ಲಿ ಫೋನ್ ಮಾಡಿ: 8277933002 ಅಥವಾ 8277933064