ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ ಗ್ರಾಮದ ನಾಗರಾಜ ನಾಯ್ಕ ಅವರಿಗೆ 2025ನೇ ಸಾಲಿನ `ಇನ್ನೋವೇಟಿವ್ ರೈತ’ ಪ್ರಶಸ್ತಿ ನೀಡಿದೆ. ದೆಹಲಿಯ ಪೂಸಾ ಕೃಷಿ ವಿಜ್ಞಾನ ಮೇಳದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
ನಾಗರಾಜ ನಾಯ್ಕ ಅವರು 600ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದಾರೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಅವುಗಳನ್ನು ಬೆಳೆದು ಸಾಧನೆ ಮಾಡಿದ್ದಾರೆ. ಮುಖ್ಯವಾಗಿ ಘಜನಿ ಭೂಮಿಯಲ್ಲಿ ಬೆಳೆಯುವ ಕರಿ ಕಗ್ಗ ಹಾಗೂ ಬಿಳಿ ಕಗ್ಗ ತಳಿಗಳನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ.
ಇದರೊಂದಿಗೆ ಹಳೆಯ ಸಂಪ್ರಾದಾಯಿಕ ತಳಿಗಳ ಸಂರಕ್ಷಣೆಗೆ ಬಗ್ಗೆ ರೈತರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಶಿರಸಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಉತ್ತರ ಕನ್ನಡ ಕೃಷಿ ಇಲಾಖೆಯವರು ಅವರ ಸಾಧನೆ ಗಮನಿಸಿ ಪ್ರೋತ್ಸಾಹಿಸಿದ್ದಾರೆ.