ಶಿರಸಿ: ಎಪಿಎಂಸಿಯ ರಿಂಗ್ ರೋಡ್ ಬಳಿ ಮಟ್ಕಾ ಆಡಿಸುತ್ತಿದ್ದ ರವಿ ಬೋವಿವಡ್ಡರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಗಣೇಶನಗರದ ಮಾರುತಿ ದೇವಸ್ಥಾನ ಬಳಿ ವಾಸಿಸುವ ರವಿ ಬೋವಿವಡ್ಡರ್ ಗೌಂಡಿ ಕೆಲಸ ಮಾಡುತ್ತಿದ್ದರು. ಅಲ್ಲಿ ದುಡಿಮೆ ಕಡಿಮೆ ಎಂದು ಮಟ್ಕಾ ಆಡಿಸುವುದನ್ನು ಕಲಿತಿದ್ದರು.
ಬುಧವಾರ ಶಿರಸಿ ಎಪಿಎಂಸಿ ಬಳಿಯ ರಿಂಗ್ ರೋಡ್ ಕ್ರಾಸಿನ ಬಳಿ ನಿಂತು ಅವರು ಮಟ್ಕಾ ಆಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದರು. ಸಾರ್ವಜನಿಕರನ್ನು ಕರೆದು ಜೂಜಾಡುವಂತೆ ಪ್ರೇರೇಪಿಸುತ್ತಿದ್ದರು.
ಇದನ್ನು ಅರಿತ ಪಿಎಸ್ಐ ರತ್ನ ಸಂಕಪ್ಪಕುರಿ ದಾಳಿ ನಡೆಸಿದ್ದು, ಜನರಿಂದ ಸಂಗ್ರಹಿಸಿದ್ದ ಈ ವೇಳೆ 710ರೂ ಸಿಕ್ಕಿತು. ರವಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.