`ನಿನ್ನೆ ಮೊನ್ನೆಯವರೆಗೂ ತುಂಬಿದ್ದ ತೊರೆಯಲ್ಲಿ ಇದೀಗ ಬರ!’ ಎಂಬ ವರದಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ತಲುಪಿದ್ದು, ತಜ್ಞರ ತಂಡ ರಚಿಸಿ ಅಧ್ಯಯನ ನಡೆಸುವಂತೆ ಸಚಿವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ವ್ಯಾಪಕ ಪ್ರಮಾಣದಲ್ಲಿ ಮಳೆಯಾದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಎದುರಾದ ಜಲಕ್ಷಾಮದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನ 16ರಂದು S News Digitel `ನಿನ್ನೆ ಮೊನ್ನೆಯವರೆಗೂ ತುಂಬಿದ್ದ ತೊರೆಯಲ್ಲಿ ಇದೀಗ ಬರ!’ ಎಂಬ ವರದಿ ಪ್ರಕಟಿಸಿತ್ತು. ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾದರೂ ಹಳ್ಳದಲ್ಲಿ ನೀರಿಲ್ಲದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕಾಡು-ಮೇಡುಗಳನ್ನು ಅಲೆದಾಡಿದ ಸಹ್ಯಾದ್ರಿ ಸಂಜಯದ ದಿನೇಶ ಹೊಳ್ಳ S News Digitel‘ಗೆ ಪ್ರತ್ಯಕ್ಷ ವರದಿ ನೀಡಿದ್ದರು.
S News Digitel ಪ್ರಕಟಿಸಿದ ಈ ವರದಿ ವ್ಯಾಪಕ ಪ್ರಮಾಣದಲ್ಲಿ ವೈರಲ್ ಆಗಿದ್ದು, ಇದನ್ನು ನಮ್ಮ ಓದುಗರು ಸಹ ಸಾಕಷ್ಟು ಕಡೆ ಶೇರ್ ಮಾಡಿದ್ದಾರೆ. ಇದರ ಪರಿಣಾಮ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ವರದಿ ಓದಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ನಿನ್ನೆ ಮೊನ್ನೆಯವರೆಗೂ ತುಂಬಿದ್ದ ತೊರೆಯಲ್ಲಿ ಇದೀಗ ಬರ!
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲಕ್ಷಾಮದ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. `ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ಎಂಪ್ರಿಯ ಸಹಯೋಗದಲ್ಲಿ ತಜ್ಞರ ತಂಡ ರಚಿಸಬೇಕು. 3 ತಿಂಗಳ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸಬೇಕು’ ಎಂದು ಅವರು ಸೂಚಿಸಿದ್ದಾರೆ.