ಸಿದ್ದಾಪುರ: `ಕಾಲೇಜು ಕಲಿಕೆಗೆ ಸಂಚಾರ ಸಮಸ್ಯೆ’ ಕುರಿತು S News ಡಿಜಿಟಲ್ ಪ್ರಕಟಿಸಿದ ವರದಿಗೆ ಮುಖ್ಯಮಂತ್ರಿ ಕಚೇರಿಯಿಂದ ಸ್ಪಂದನೆ ಸಿಕ್ಕಿದೆ.
ಸಿದ್ದಾಪುರದಿಂದ ಸಾಗರ, ಶಿರಸಿಗೆ ತೆರಳಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಹರೀಶಕುಮಾರ ಎಂಬಾತರು ಟ್ವೀಟ್ ಮಾಡಿದ್ದರು. ನ 21ರಂದು S News ಡಿಜಿಟಲ್’ನಲ್ಲಿ ಈ ವರದಿ ಪ್ರಸಾರವಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತುರ್ತು ಕ್ರಮಕ್ಕೆ ಸೂಚಿಸಿದ್ದಾರೆ. `ಸಾರಿಗೆಗಳನ್ನು ನಿಯಮಿತವಾಗಿ ನಿಗದಿತ ವೇಳೆಯಲ್ಲಿ ಕಲ್ಪಿಸಬೇಕು’ ಎಂದು ಘಟಕ ವ್ಯವಸ್ಥಾಪಕರಿಗೆ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಬಂದಿದೆ.
ಇದನ್ನೂ ಓದಿ: ಕಾಲೇಜು ಕಲಿಕೆಗೆ ಸಂಚಾರ ಸಮಸ್ಯೆ
`ಸಿದ್ದಾಪುರದಿಂದ ಸಾಗರ ಮಾರ್ಗದಲ್ಲಿ ಮುಂಜಾನೆಯಿAದ ಸಾಯಂಕಾಲದವರೆಗೆ ಒಟ್ಟು 55 ಬಸ್ ಚಲಿಸುತ್ತದೆ. ಉತ್ತರ ಕನ್ನಡ ವಿಭಾಗದ 38 ಹಾಗೂ ಶಿವಮೊಗ್ಗ ವಿಭಾಗದ 17 ಸಾರಿಗೆಗಳು ಅವಾಗಿದ್ದು, ಮುಂಜಾನೆ 6 ಗಂಟೆಯಿAದ 10 ಗಂಟೆಯವರೆಗೆ ಉತ್ತರ ಕನ್ನಡ ವಿಭಾಗದ ಒಟ್ಟು 10 ಸಾರಿಗೆಗಳು ಕಾರ್ಯಾಚರಿಸುತ್ತಿವೆ’ ಎಂದು ಕೆಎಸ್ಆರ್ಟಿಸಿ ನಿಗಮದವರು ಹೇಳಿದ್ದಾರೆ.