ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಶುರುವಾಗಿದ್ದು, ವಾರಾಂತ್ಯದ ಪ್ರವಾಸದ ಯೋಚನೆಯಲ್ಲಿದ್ದವರಿಗೆ ಮುರುಡೇಶ್ವರ ಯೋಗ್ಯ ಸ್ಥಳ. ದೇವರ ದರ್ಶನದೊಂದಿಗೆ ಸಮುದ್ರದಲ್ಲಿನ ಜಲಕ್ರೀಡೆಗಳಿಗೆ ಸಹ ಇಲ್ಲಿ ಸುರಕ್ಷಿತ ಅವಕಾಶವಿದೆ. ಊಟ-ವಸತಿ ಸೇರಿ ಮೂಲಭೂತ ಸೌಕರ್ಯಗಳಿಗೂ ಇಲ್ಲಿ ಕೊರತೆ ಇಲ್ಲ!
ಅಕ್ಟೊಬರ್ 1ರಿಂದ ಮುರುಡೇಶ್ವರ ಮುಖ್ಯ ಕಡಲತೀರ ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿದೆ. ಮಳೆಗಾಲ ಮುಗಿದ ನಂತರ ಈ ಚಟುವಟಿಕೆಗಳು ಶುರುವಾಗಿದ್ದು, ಸಮುದ್ರ ಪ್ರವಾಸಿ ಚಟುವಟಿಕೆ ಮೇ 30ರವರೆಗೂ ಮುಂದುವರೆಯುತ್ತದೆ. ಮೊದಲ ದಿನವೇ ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದು, ಉತ್ಸಾಹದಿಂದಲೇ ನೀರಿಗಿಳಿದಿದ್ದಾರೆ. ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿರುವುದರಿಂದ ನಿತ್ಯ ಸಾವಿರ ಸಂಖ್ಯೆಯ ಜನ ಇಲ್ಲಿ ಭೇಟಿ ನೀಡುತ್ತಿದ್ದಾರೆ. ರಜಾ ದಿನಗಳಲ್ಲಿಯೂ ಲಕ್ಷ ಸಂಖ್ಯೆಯ ಜನ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಹೀಗೆ ಬರುವ ಎಲ್ಲರಿಗೂ ನಿಗದಿತ ಸಮಯಕ್ಕೆ ನಿಗದಿತ ಸೇವೆ ನೀಡುವಲ್ಲಿ `ಓಶನ್ ಅಡ್ವಂಚರ್’ ಮುಂಚೂಣಿಯಲ್ಲಿದೆ.
ಓಶನ್ ಅಡ್ವೇಂಚರ್ ಮೂಲಕ ಎಲ್ಲಿಯೂ ಇಲ್ಲದ ಪ್ಯಾರಾಸೆಲಿಂಗ್ ಅನುಭವ ಮುರುಡೇಶ್ವರದಲ್ಲಿ ಸಿಗುತ್ತದೆ. ಸದ್ಯ ಸಮುದ್ರದ ಅಲೆಗಳನ್ನು ಆಹ್ವಾದಿಸುತ್ತ ಭಾನಂಗಳದಲ್ಲಿ ಹಾರುವ ಪ್ಯಾರಾಸೆಲಿಂಗ್ ಮುರುಡೇಶ್ವರ ಹೊರತುಪಡಿಸಿ ಬೇರೆಲ್ಲೂ ಇಲ್ಲ. ಸಮುದ್ರದಲ್ಲಿ ತೇಲುವ ಸೇತುವೆ ಮೇಲೆ ಸಹ ಪ್ರತಿಯೊಬ್ಬರಿಗೂ ಕುಣಿದಾಡುವ ಅವಕಾಶಗಳಿವೆ. ಬನಾನಾ ರೈಡ್, ಸ್ಪೀಡ್ ಬೋಟ್, ಪ್ಲೋಟಿಂಗ್ ಬ್ರಿಡ್ಜ್, ಪ್ಯಾರಾಸಿಲಿಂಗ್, ಕಯಾಕಿಂಗ್, ಸ್ಪೀಡ್ ಬೋಟ್, ಜಟ್ ಸ್ಕೀ ಹಾಗೂ ಡಾಲ್ಪಿನ್ ಸಫಾರಿಯ ಅನುಭೂತಿಗಾಗಿ ಮುರುಡೇಶ್ವರ ಹೇಳಿ ಮಾಡಿಸಿದ ಸ್ಥಳ.
ಯಾವುದಕ್ಕೆ ಎಷ್ಟು ದರ?
99 ರೂಪಾಯಿಯಿಂದ ಶುರುವಾಗುವ ಓಶನ್ ಅಡ್ವೇಂಚರ್ ಅವರ ಚಟುವಟಿಕೆಗಳು 999ರೂಪಾಯಿಯವರೆಗಿದೆ. ಐಷಾರಾಮಿ ಹೋಟೆಲಿನಲ್ಲಿ ಊಟ-ವಸತಿ ಜೊತೆ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ 3999ರೂಪಾಯಿ ಶುಲ್ಕವಿದೆ. ಗುಂಪಿನಲ್ಲಿ ಹೋದರೆ ಇನ್ನಷ್ಟು ರಿಯಾಯಿತಿಯೂ ಸಿಗಬಹುದು.
ನಿಮ್ಮ ಬರುವಿಕೆಯನ್ನು ಪ್ರವಾಸಿ ಮಾರ್ಗದರ್ಶಕರೊಂದಿಗೆ ಕಾಯ್ದಿರಿಸಲು ಇಲ್ಲಿ ಫೋನ್ ಮಾಡಿ: 7337632411
ಓಶನ್ ಅಡ್ವೇಂಚರ್ ಚಟುವಟಿಕೆಗಳ ವಿಡಿಯೋ ಇಲ್ಲಿ ನೋಡಿ…