ಯಲ್ಲಾಪುರ: ಸಂಕಲ್ಪ ಉತ್ಸವದ ಮೂರನೇ ದಿನವಾದ ಭಾನುವಾರ ಗಾಂಧೀ ಕುಟೀರದಲ್ಲಿ `ಪಂಚವಟಿ’ ಯಕ್ಷಗಾನ ನಡೆದಿದ್ದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.
ಕೆರೆಮನೆ ಶಿವಾನಂದ ಹೆಗಡೆ ತಂಡದವರು ಈ ಯಕ್ಷಗಾನವನ್ನು ನಡೆಸಿಕೊಟ್ಟರು. ಇದಕ್ಕೂ ಮುನ್ನ ಗಣಪತಿ ಹೆಗಡೆ ಅವರಿಂದ ಭಕ್ತಿ ಸಂಗೀತ ನಡೆಯಿತು. ಯಕ್ಷಗಾನದ ನಂತರ ಯೋಗನೃತ್ಯ ಹಾಗೂ ನೃತ್ಯ ರೂಪಕ ನಡೆಯಿತು. ಸುಮಾ ಹೆಗಡೆ ತೊಂಡೆಕೆರೆ ಅವರು ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು.
ಇದೇ ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಗಂಗಾ ಖಾಂಡೇಕರ್, ಉತ್ತಮ ಕೃಷಿಕ ವಿಶ್ವನಾಥ ನಾಡಗುಳಿ ಶರ್ಮಾ, ಪತ್ರಕರ್ತ ಸಿ ಆರ್ ಶ್ರೀಪತಿ ಹಾಗೂ ಶಿಕ್ಷಕ ಚಂದ್ರಶೇಖರ ನಾಯಕ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮವನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಿದರು. ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ಪ್ರಮುಖ ಸಹಕಾರಿ ಧುರೀಣರಾದ ಉಮೇಶ ಭಾಗ್ವತ್, ಆರ್ ಎಸ್ ಭಟ್ಟ, ಟಿ ವಿ ಕೋಮಾರ, ಸುಬ್ಬಣ್ಣ ಬೋಳ್ಮನೆ, ಗಣಪತಿ ಮುದ್ದೇಪಾಲ್ ಇತರರು ವೇದಿಕೆಯಲ್ಲಿದ್ದರು. ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿದರು. ಪ್ರಭಾತ ಭಟ್ಟ ಪ್ರಾರ್ಥಿಸಿದರು. ಸುವರ್ಣಲತಾ ಪಟಗಾರ ನಿರ್ವಹಿಸಿದರು.
38ನೇ ಸಂಕಲ್ಪ ಉತ್ಸವಕ್ಕೆ ಸೋಮವಾರ ಕೊನೆ ದಿನ. ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ!